ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಹಳೆಯದಾಗುತ್ತಾ ಬಂದಿದ್ದು, ಒಂದೊಮ್ಮೆ ಅವರು ವಿಚ್ಛೇದನ ಪಡೆದರೂ ಯಾರಿಗೂ ಅಚ್ಚರಿ ಇಲ್ಲದಂತಾಗಿದೆ. ಈಗ ಈ ದಂಪತಿಗಳ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ‘ಗುರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ಈ ಜೋಡಿ ಈಗ ಮತ್ತೆ ತೆರೆಹಂಚಿಕೊಳ್ಳಲು ರೆಡಿ ಆಗಿದೆ ಎನ್ನಲಾಗಿದೆ. ಇವರಿಬ್ಬರ ಫೇವರಿಟ್ ನಿರ್ದೇಶಕ ಮಣಿರತ್ನಂ ಅವರು ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ ಅಂತೆ ಇದನ್ನು ಕೇಳಿ ಅಭಿಷೇಕ್ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೂ 2007ರಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಅವರು ‘ಗುರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದು, ಇವರ ಮದುವೆಗೂ ಕೆಲವೇ ತಿಂಗಳು ಮೊದಲು ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮಣಿರತ್ನಂ ಈ ಜೋಡಿಯನ್ನು ಮತ್ತೆ ‘ರಾವಣ್’ ಸಿನಿಮಾದಲ್ಲಿ ತೆರೆಮೇಲೆ ತಂದಿದ್ದು, ಈಗ ಈ ಜೋಡಿಗೆ ಹೊಂದಿಕೆ ಆಗುವ ಮತ್ತೊಂದು ಕಥೆಯೊಂದಿಗೆ ಅವರು ಬಂದಿದ್ದಾರೆ ಎನ್ನಲಾಗಿದೆ.
ಅಷ್ಟೆ ಅಲ್ಲದೇ 2007ರಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಅವರು ‘ಗುರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದು, ಇವರ ಮದುವೆಗೂ ಕೆಲವೇ ತಿಂಗಳು ಮೊದಲು ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮಣಿರತ್ನಂ ಮಾಡಿದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ಮಣಿರತ್ನಂ ಈ ಜೋಡಿಯನ್ನು ಮತ್ತೆ ‘ರಾವಣ್’ ಸಿನಿಮಾದಲ್ಲಿ ತೆರೆಮೇಲೆ ತಂದರು. ಈಗ ಈ ಜೋಡಿಗೆ ಹೊಂದಿಕೆ ಆಗುವ ಮತ್ತೊಂದು ಕಥೆಯೊಂದಿಗೆ ಅವರು ಬಂದಿದ್ದಾರೆ ಎನ್ನಲಾಗಿದೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಇಬ್ಬರಿಗೂ ಮಣಿರತ್ನಂ ಫೇವರಿಟ್ ನಿರ್ದೇಶಕ. ಅಭಿಷೇಕ್ ನಟನೆಯ ‘ಯುವ’ ಸಿನಿಮಾಗೆ ಮಣಿರತ್ನಂ ಅವರದ್ದೇ ನಿರ್ದೇಶನ ಇತ್ತು. ಆ ಬಳಿಕ ‘ಗುರು’ ಹಾಗೂ ‘ರಾವಣ್ ’ ಸಿನಿಮಾದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದರು. ಈಗ ಈ ಸುದ್ದಿ ನಿಜವೇ ಆದಲ್ಲಿ ನಾಲ್ಕನೇ ಬಾರಿಗೆ ಇವರು ಒಂದಾದಂತೆ ಆಗಲಿದೆ.
ಈ ಮೊದಲು ಅಭಿಷೇಕ್ ಅವರು ಮಣಿರತ್ನಂ ಬಗ್ಗೆ ಮಾತನಾಡಿದ್ದರು. ‘ಯುವ’ ಸಿನಿಮಾದ ಕಥೆ ಹೇಳಲು ಅಭಿಷೇಕ್ ಮನೆಗೆ ಮಣಿರತ್ನಂ ಬಂದಿದ್ದರು. ತಂದೆಗೆ ಕಥೆ ಹೇಳಲು ಬಂದಿರಬಹುದು ಎಂದು ಅಭಿಷೇಕ್ ಭಾವಿಸಿದ್ದರು. ಆದರೆ, ನಂತರ ಮಣಿರತ್ನಂ ಸಿನಿಮಾ ಮಾಡೋಕೆ ಬಂದಿದ್ದು ತಮಗೆ ಎಂಬ ವಿಚಾರ ತಿಳಿದು ಅವರಿಗೆ ಖುಷಿ ಆಯಿತು.