ಬೆಂಗಳೂರು : ಸರಿಗಮಪ ಸೀಸನ್ 19ರ ಪೋರಿ ದಿಯಾ ಹೆಗ್ಡೆ ಪ್ರತಿಭೆಗೆ ತಲೆದೂಗದವರೇ ಇಲ್ಲ. ಅಲ್ಲದೆ ಸೂಪರ್ ಸ್ಟಾರ್ ಸಿಂಗರ್ 3 ಶೋನಲ್ಲೂ ಭಾಗಿಯಾಗಿದ, ಈ ಪುಟಾಣಿಯ ಹಾಡು, ಡ್ಯಾನ್ಸ್ ಪ್ರೆಸೆಂಟ್ ಮಾಡೋ ರೀತಿ ನಿಜಕ್ಕೂ ಅದ್ಭುತ. ಮುಗ್ಧ ನಗುವಿನ ದಿಯಾ ಹೆಗ್ಡೆ ಮೋಡಿಗೆ ವೀಕ್ಷಕರು ಫಿದಾ ಆಗಿದು. ಈ ಪುಟಾಣಿಗೆ ಹಿರಿಯರು-ಕಿರಿಯರು ಇದ್ಯಾವ ಮಿತಿಯೇ ಇಲ್ಲದೇ ಅಪಾರ ಅಭಿಮಾನಿ ಬಳಗವೆ ಇದೆ.
ಇನ್ನೂ ಈ ಮಧ್ಯೆ ತಮ್ಮ ಇನ್ಸ್ಟಾ ಖಾತೆಯಲ್ಲಿ ದಿಯಾ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನವರಾತ್ರಿ ಹಬ್ಬದ ಪ್ರಯುಕ್ತ ದೇವಿಯ ರೂಪದಲ್ಲಿ ಕಾಣಿಸಿಕೊಂಡಿದ್ದು, ಇದಿಗಾ ಈ ಲುಕ್ ತುಂಬಾ ಅದ್ಭುತವಾಗಿ ಮೂಡಿಬಂದಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಪುಟ್ಟ ಹುಡುಗಿ ದಿಯಾಳ ಬಗ್ಗೆ ಭಿನ್ನ ವಿಭಿನ್ನವಾಗಿ ಕಾಮೆಂಟ್ಸ್ ಹಾಕಿದ್ದಾರೆ. ಬೇಬಿ ಶ್ಯಾಮಿಲಿ ಅವರನ್ನ ನೋಡಿದ ಹಾಗೆ ಆಯ್ತು, ಸೂಪರ್ ದಿಯಾ ಅಂತಾ ಕಾಮೆಂಟ್ಸ್ ಹಾಕಿದ್ದಾರೆ.
ಇದನ್ನೂ ಓದಿ : https://ashwaveega.com/megastar-bought-property-worth-16-crores-in-ooty/