Ashwaveega News 24×7 ಫೆಬ್ರವರಿ 16 -2026 – ಬೆಂಗಳೂರು : ರಾಜಕೀಯ ಗೊಂದಲಗಳ ನಡುವೆಯೇ ರಾಜ್ಯ ಕಾಂಗ್ರೆಸ್ ಶಾಸಕರು “ಫಾರಿನ್ ಟೂರ್”ಗೆ ಸಜ್ಜಾಗಿರುವ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಯೋಜನೆಯಂತೆ 27 ಮಂದಿ — ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು — ವಿದೇಶ ಪ್ರವಾಸಕ್ಕೆ ತೆರಳಲು ಸಿದ್ಧರಾಗಿದ್ದಾರೆ ಅಂತೆ .
ಬಹುಪಾಲು ಸಿಎಂ ಬಣದವರೇ ಈ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ. ಪಕ್ಷದ ಒಳಗಿನ “ಪವರ್ ಫೈಟ್” ಚರ್ಚೆಗಳ ನಡುವೆಯೇ ಈ ವಿದೇಶ ಪ್ರವಾಸ ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬ್ರೇಕ್ ಹಾಕಲಾಗಿತ್ತು ಎಂಬ ಮಾತು ಕೇಳಿ ಬಂದಿದ್ದರೂ, ಇದೀಗ ಮತ್ತೆ ಯೋಜನೆ ಜೀವಂತಗೊಂಡಿದೆ . ನಾಳೆಯೇ ಫ್ಲೈಟ್ ಹತ್ತುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.
ವಿರೋಧ ಪಕ್ಷಗಳು ಈ ಪ್ರವಾಸದ ಅವಶ್ಯಕತೆ ಕುರಿತು ಪ್ರಶ್ನೆ ಎತ್ತಿದರೆ, ಕಾಂಗ್ರೆಸ್ ವಲಯದಲ್ಲಿ ಇದು ಪೂರ್ವ ನಿಯೋಜಿತ ಅಧ್ಯಯನ ಪ್ರವಾಸವೆಂಬ ಸ್ಪಷ್ಟನೆ ಕೇಳಿ ಬರುತ್ತಿದೆ .
ರಾಜಕೀಯ ಬೆಳವಣಿಗೆಗಳ ನಡುವೆ ಈ “ಫಾರಿನ್ ಟೂರ್” ಮುಂದುವರಿಯುತ್ತದೆಯೇ ಅಥವಾ ಮತ್ತೆ ತಾತ್ಕಾಲಿಕ ಬ್ರೇಕ್ ಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
