
rashmika mandanna thanked shiva rajkumar forpraising her new movie look
ತಮ್ಮ ಇತ್ತೀಚಿನ ‘ಕುಬೇರ’ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಂದು ‘ಮೈಸಾ’ ಎಂಬ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. 2021ರಲ್ಲಿ ತೆಲುಗು ಸೋಷಿಯಲ್ ಡ್ರಾಮಾ ‘ಅರ್ಧ ಶತಬ್ದಂ’ ಮೂಲಕ ನಿರ್ದೇಶನಕ್ಕಿಳಿದ ರವೀಂದ್ರ ಪುಲ್ಲೆ ನಿರ್ದೇಶನದ ಈ ಚಿತ್ರದ ಮೊದಲ ನೋಟ ಇಂದು ಅನಾವರಣಗೊಂಡಿದೆ. ಈ ‘ಮೈಸಾ’ ಐದು ಭಾಷೆಗಳಲ್ಲಿ ಅಂದರೆ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.
ಫಸ್ಟ್ ಲುಕ್ ಪೋಸ್ಟರ್ನಲ್ಲಿ, ರಶ್ಮಿಕಾ ಉಗ್ರ ಮತ್ತು ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ಕ್ಲೋಸ್ ಅಪ್ ಲುಕ್ನಲ್ಲಿ ನಟಿಯ ಮುಖ ರಕ್ತದಿಂದ ಕೂಡಿದ್ದು, ಕತ್ತಿಯಂತೆ ಕಾಣುವ ಆಯುಧವನ್ನು ಹಿಡಿದಿದ್ದಾರೆ. ಕೂದಲು ಕೆದರಿದ್ದು, ಆಕ್ರಮಣಕಾರಿಯಾಗಿ, ಯುದ್ಧಕ್ಕೆ ಸಿದ್ಧರಾಗಿರುವಂತೆ ಕಾಣಿಸಿಕೊಂಡಿದ್ದು, ನಟಿಯ ನೋಟ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಟಿಯ ಈ ಹೊಸ ಪ್ರಾಜೆಕ್ಟ್ಗೆ ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ಕುಮಾರ್ ಶುಭ ಕೋರಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಟಿಯ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡ ಶಿವರಾಜ್ಕುಮಾರ್, ”ನಿಮಗೆ ಶುಭ ಹಾರೈಸುತ್ತೇನೆ ರಶ್ಮಿಕಾ ಮಂದಣ್ಣ, ಮೈಸಾ” ಎಂದು ಬರೆದುಕೊಂಡಿದ್ದಾರೆ.
ಶಿವಣ್ಣನ ಬೆಂಬಲಕ್ಕೆ ರಶ್ಮಿಕಾ ಮಂದಣ್ಣ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ. ಶಿವರಾಜ್ಕುಮಾರ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿ, ”ಶಿವಣ್ಣ ಸರ್! ತುಂಬಾ ಧನ್ಯವಾದಗಳು. ತುಂಬಾನೇ ಗೌರವ ಅನಿಸುತ್ತಿದೆ!” ಎಂದು ಬರೆದುಕೊಂಡಿದ್ದಾರೆ.