Ashwaveega News 24×7 ಫೆಬ್ರವರಿ 17 -2026 ಬೆಂಗಳೂರು : ಚಿನ್ನ ಹಾಗೂ ಬೆಳ್ಳಿ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದೆ. ಇತ್ತೀಚಿನ ಭಾರೀ ಏರಿಕೆಯ ನಂತರ ಬೆಳ್ಳಿ ದರದಲ್ಲಿ ನಿರಂತರ ಕುಸಿತ ಕಂಡುಬರುತ್ತಿದ್ದು, ಗ್ರಾಹಕರಿಗೆ ಇದು ಅನುಕೂಲಕರ ಬೆಳವಣಿಗೆಯಾಗಿದೆ.
ಕೆಲ ದಿನಗಳ ಹಿಂದೆ ಕಿಲೋಗೆ 4 ಲಕ್ಷ ರೂಪಾಯಿ ಗಡಿ ತಲುಪಿದ್ದ ಬೆಳ್ಳಿ ದರ ಇದೀಗ ಭಾರೀ ಇಳಿಕೆಯಾಗಿದ್ದು, ಪ್ರಸ್ತುತ ಒಂದು ಕೆ.ಜಿ. ಬೆಳ್ಳಿ ಬೆಲೆ ಸುಮಾರು 2 ಲಕ್ಷ 40 ಸಾವಿರ ರೂಪಾಯಿಗೆ ಇಳಿದಿದೆ. ದೊಡ್ಡಮಟ್ಟದ ಏರಿಕೆಯ ಬಳಿಕ ದರ ಕುಸಿತ ಕಂಡಿರುವುದರಿಂದ ಹೂಡಿಕೆದಾರರಿಗೆ ಇದು ದೊಡ್ಡ ಹೊಡೆತ ನೀಡಿದಂತಾಗಿದೆ. ಆದರೆ ಖರೀದಿದಾರರು ಮತ್ತು ಆಭರಣ ಪ್ರಿಯರು ಬೆಳ್ಳಿ ಖರೀದಿಗೆ ಮುಂದಾಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನೊಂದೆಡೆ ಚಿನ್ನದ ದರದಲ್ಲಿ ಗಣನೀಯ ಬದಲಾವಣೆ ಕಂಡುಬಂದಿಲ್ಲ. ಸ್ವಲ್ಪ ಏರಿಕೆ–ಇಳಿಕೆಯ ನಡುವೆಯೇ ಚಿನ್ನದ ಬೆಲೆ ಟ್ರೇಡ್ ಆಗುತ್ತಿದೆ. ಪ್ರಸ್ತುತ 10 ಗ್ರಾಂ ಬಂಗಾರದ ಬೆಲೆ ಸುಮಾರು 1 ಲಕ್ಷ 56 ಸಾವಿರ ರೂಪಾಯಿ ಮಟ್ಟದಲ್ಲಿ ಸ್ಥಿರವಾಗಿದೆ.
ಒಟ್ಟಾರೆ, ಬೆಳ್ಳಿ ದರದ ನಿರಂತರ ಇಳಿಕೆ ಮಾರುಕಟ್ಟೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ದರ ಏರಿಕೆಯಾಗುತ್ತದೆಯೋ ಅಥವಾ ಇನ್ನಷ್ಟು ಇಳಿಕೆಯಾಗುತ್ತದೆಯೋ ಎಂಬುದನ್ನು ಕಾದುನೋಡಬೇಕಾಗಿದೆ.
