Ashwaveega News 24×7 ಫೆಬ್ರವರಿ 17 -2026 ಬೆಂಗಳೂರು: “ಬೀದಿನಾಯಿ” ಹೋಲಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರೊಬ್ಬರು “ಬಾಲವೇ ನಾಯಿ ಅಲುಗಾಡಿಸಿದ್ರೆ ಹೇಗೆ ?” ಎಂಬ ಹೇಳಿಕೆ ನೀಡಿದ್ದ ಹಿನ್ನೆಲೆ, ಕಾಂಗ್ರೆಸ್ ವಲಯದಲ್ಲಿ ಮಾತಿನ ಸಮರ ಜೋರಾಗಿದೆ.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಂಸದ D. K. Suresh, “ನಾಯಿಗಳನ್ನು ಯಾರಿಗೆ ಹೋಲಿಸಿದ್ದಾರೆ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರು ನಿಯತ್ತಿನ ನಾಯಿಗಳು. ನಾಯಿ ಯಜಮಾನನ ಋಣ ತೀರಿಸುತ್ತದೆ, ಬೇರೆ ಏನೂ ಮಾಡುವುದಿಲ್ಲ. ಅದರ ಸ್ವಭಾವವೇ ಹಾಗೆ,” ಎಂದು ಹೇಳಿದರು.
“ಬೀದಿ ನಾಯಿಯನ್ನೂ ಮನೆಗಳಲ್ಲಿ ಸಾಕುತ್ತಾರೆ. ಯಾಕೆಂದರೆ ಅದು ನಿಷ್ಠಾವಂತ ಪ್ರಾಣಿ. ಎಲ್ಲರೂ ನಿಯತ್ತಿಗಾಗಿ ನಾಯಿಗಳನ್ನು ಸಾಕುತ್ತಾರೆ. ಬೀದಿ ನಾಯಿಗೂ ಊಟ ಹಾಕುತ್ತಾರೆ, ಅದು ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ ಇದೆ,” ಎಂದು ಅವರು ಅಭಿಪ್ರಾಯಪಟ್ಟರು.
ಸಚಿವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ಡಿಕೆ ಬಣದ ನಾಯಕರು ಮಹದೇವಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಒಳರಾಜಕೀಯಕ್ಕೆ ಹೊಸ ತಿರುವು ನೀಡಿದೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
