Ashwaveega News 24×7 ಫೆಬ್ರವರಿ 14 -2026 – ಬೆಂಗಳೂರು: ಪ್ರೇಮಿಗಳ ದಿನಾಚರಣೆಯ ಸಂಭ್ರಮದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರುನಲ್ಲಿ ಗುಲಾಬಿ ಹೂಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ವಿಶೇಷವಾಗಿ ಕೆಂಪು ಗುಲಾಬಿ ಖರೀದಿಸಲು ಯುವಜನತೆ ಮುಗಿಬಿದ್ದಿದ್ದು, ಹೂಗಳ ದರ ಗಗನಕ್ಕೇರಿದೆ.
ಹಿಂದೆ 30 ರೂಪಾಯಿಗೆ ಮಾರಾಟವಾಗುತ್ತಿದ್ದ ಒಂದು ಗುಲಾಬಿ ಹೂ ಈಗ 60 ರಿಂದ 80 ರೂಪಾಯಿವರೆಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಡಿಮ್ಯಾಂಡ್ ಇರುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ. 10 ಗುಲಾಬಿಗಳ ಹೂಗುಚ್ಛದ ಬೆಲೆ 700 ರಿಂದ 800 ರೂಪಾಯಿವರೆಗೆ ತಲುಪಿದೆ.
ನಗರದ ಪ್ರಮುಖ ಉದ್ಯಾನವನಗಳು, ಮಾಲ್ಗಳು, ಥಿಯೇಟರ್ಗಳು, ರೆಸ್ಟೋರೆಂಟ್ಗಳು ಹಾಗೂ ಹೋಟೆಲ್ಗಳ ಮುಂಭಾಗಗಳಲ್ಲಿ ತಾತ್ಕಾಲಿಕ ಹೂ ಅಂಗಡಿಗಳು ತೆರೆಯಲಾಗಿದ್ದು, ಬೆಳಗ್ಗೆಯಿಂದಲೇ ಖರೀದಿದಾರರ ರದ್ದೊತ್ತಡ ಕಂಡುಬಂದಿದೆ. ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಯುವಕರು, ಯುವತಿಯರು ಪರಸ್ಪರರಿಗೆ ಕೆಂಪು ಗುಲಾಬಿ ನೀಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
“ಪ್ರತಿ ವರ್ಷಕ್ಕಿಂತ ಈ ಬಾರಿ ವ್ಯಾಪಾರ ತುಂಬಾ ಚೆನ್ನಾಗಿದೆ. ವಿಶೇಷವಾಗಿ ಕೆಂಪು ಗುಲಾಬಿಗೆ ಹೆಚ್ಚಿನ ಬೇಡಿಕೆ ಇದೆ,” ಎಂದು ಹೂವಿನ ವ್ಯಾಪಾರಿಯೊಬ್ಬರು ಸಂತೋಷ ವ್ಯಕ್ತಪಡಿಸಿದರು.
ಒಟ್ಟಾರೆ, ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಗುಲಾಬಿ ವ್ಯಾಪಾರಕ್ಕೆ ಚೈತನ್ಯ ದೊರೆತಿದ್ದು, ಹೂ ಮಾರಾಟಗಾರರ ಮುಖದಲ್ಲಿ ನಗು ಮೂಡಿಸಿದೆ.
