Ashwaveega News 24×7 ಫೆಬ್ರವರಿ 16 -2026 ಕಲಬುರಗಿ : ಐಟಿ–ಬಿಟಿ ಕಂಪನಿಗಳು ಏಕೆ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ? ಯುವಕರು ಉದ್ಯೋಗಕ್ಕಾಗಿ ಇನ್ನೂ ಪರದಾಡಬೇಕಾದ ಪರಿಸ್ಥಿತಿ ಯಾಕೆ ? ಕುಡಿಯುವ ನೀರಿಗೂ ಹಾಹಾಕಾರ ಇರುವ ಸ್ಥಿತಿ ಏಕೆ ಮುಂದುವರಿಯುತ್ತಿದೆ ?
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿ.ವೈ. ವಿಜಯೇಂದ್ರ , ಮೊದಲು ನಿಮ್ಮ ಮನೆ ಕತ್ತಲನ್ನು ಹೋಗಿಸಿ, ನಂತರ ಬೆಳಗುತ್ತಿರುವ ಕರಾವಳಿಯ ಬಗ್ಗೆ ಮಾತನಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ ಜನರು ನಿಮ್ಮನ್ನು ನಂಬಿ ವರ್ಷಗಳ ಕಾಲ ಅಧಿಕಾರ ನೀಡಿದರು. ನಿಮ್ಮ ಕುಟುಂಬಕ್ಕೆ ಸತತವಾಗಿ ಒಂದಲ್ಲೊಂದು ಹುದ್ದೆ ಸಿಕ್ಕಿದೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಿಮ್ಮ ಕುಟುಂಬದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವ ಸ್ಥಾನಗಳು ಲಭಿಸಿವೆ. ಆದರೂ ಕಲಬುರಗಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಕರಾವಳಿಗೆ ಕೋಮುವಾದದ ಹಣೆಪಟ್ಟಿ ಹಚ್ಚುವುದು ಸರಿಯಲ್ಲ. ಕರಾವಳಿ ಭಾಗ ಆರ್ಥಿಕವಾಗಿ ಬೆಳೆಯುತ್ತಿದೆ. ಅಲ್ಲಿ ಬಂದಿರುವ ಬಂಡವಾಳ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ರಾಜಕೀಯ ದೃಷ್ಟಿಯಿಂದ ಟೀಕಿಸುವುದು ಹಾಸ್ಯಾಸ್ಪದ ಎಂದು ವಿಜಯೇಂದ್ರ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ರಾಜಕೀಯ ದಿವಾಳಿ ತನವನ್ನು ತೋರಿಸುತ್ತದೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ವ್ಯವಸ್ಥಿತ ಪ್ರಯತ್ನವೇ ಇದು ಎಂದು ಆರೋಪಿಸಲಾಗಿದೆ.
ಒಟ್ಟಾರೆ, ಕಲಬುರಗಿ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ಹಾಗೂ ಕಾರ್ಯಪದ್ಧತಿಯನ್ನು ತೋರಿಸಬೇಕೆಂಬ ಒತ್ತಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
