ಹಾವೇರಿ : ನಾವು ಬಹಳ ದೊಡ್ಡ ಅಂತರದಲ್ಲಿ ಶಿಗ್ಗಾಂವಿ ಕ್ಷೇತ್ರ ಗೆಲ್ತೇವೆ, ಚುನಾವಣೆ ಫಲಿತಾಂಶದ ವರಗೆ ಕಾಯುವ ಅವಶ್ಯಕತೆ ಇಲ್ಲ, ಎಂದು ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂದು ಶಿಗ್ಗಾಂವಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ವೈ ಇವತ್ತಿನ ಮೆರವಣಿಗೆ ನೋಡಿದ್ರೆ ನಿಮಗೆ ಅರ್ಥ ವಾಗುತ್ತೆ, ಮೂರು ಕ್ಷೇತ್ರದವನ್ನ ನಾವು ಗೆದ್ದೆ ಗೆಲ್ತೇವೆ, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯಕ್ಕೆ ಜನರು ಮತ ನೀಡ್ತಾರೆ. ಎಲ್ಲ ವರ್ಗದ ಜನರು ಬೆಂಬಲ ನಮಗಿದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.