
why kiccha sudeep again came back to bigg boss season 12 here is the reason
ಕೊನೆಗೂ ಬಿಗ್ಬಾಸ್ ವೀಕ್ಷಕರಿಗೆ ಖುಷಿ ಸುದ್ದಿ ಕೊಟ್ಟಿದೆ ತಂಡ. ಈ ಬಾರಿಯ ಬಿಗ್ಬಾಸ್ ಸೀಸನ್ 12 ನಿರೂಪಣೆ ಸಾರಥ್ಯವನ್ನು ಕಿಚ್ಚ ಸುದೀಪ್ ಅವರೇ ವಹಿಸಿಕೊಳ್ಳುತ್ತಿದ್ದಾರೆ.
ಇದು ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ, ಬಿಗ್ಬಾಸ್ ವೀಕ್ಷಕರಿಗೆ ಖುಷಿ ಕೊಟ್ಟಿದೆ. ಹೌದು, ಕನ್ನಡ ರಿಯಾಲಿಟಿ ಶೋ ಬಿಗ್ಬಾಸ್ 12 ಸೀಸನ್ ಆರಂಭಕ್ಕೆ ಸಜ್ಜಾಗಿದ್ದು, ಇನ್ನು, ಬಿಗ್ಬಾಸ್ ಹೊಸ ಸೀಸನ್ ಆರಂಭಕ್ಕೆ 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಬಿಗ್ಬಾಸ್ ತಂಡ ಇಂದು ಆಯೋಜನೆ ಮಾಡಿದ ಪ್ರೆಸ್ ಮೀಟ್ನಲ್ಲಿ ಮುಂದಿನ ಸೀಸನ್ ಅನ್ನು ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯಲಿದ್ದಾರೆ ಎಂದು ಅನೌನ್ಸ್ ಮಾಡಿದೆ.
ಕಳೆದ 11ನೇ ಸೀಸನ್ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು. ಕಿಚ್ಚನ ಈ ಮಾತು ಬಿಗ್ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು. ಇದೀಗ ಬಿಗ್ಬಾಸ್ ಸೀಸನ್ 12 ಶುರುವಾಗೋದಕ್ಕೆ ಇನ್ನು 3-4 ತಿಂಗಳು ಬಾಕಿ ಇದೆ.
ಹೀಗಿರೋವಾಗ ಕಿಚ್ಚ ಸುದೀಪ್ ಅವರ ಮನಸ್ಸನ್ನ ಆ ವಾಹಿನಿ ಒಲಿಸುವುದಕ್ಕೆ ಪ್ರಯತ್ನ ಕೊನೆಗೂ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಇನ್ನೂ, ಇಂದು ನಡೆಯುತ್ತಿರೋ ಸುದ್ದಿಗೋಷ್ಠಿಯಲ್ಲಿ ಮತ್ತೆ ಬಿಗ್ಬಾಸ್ ನಿರೂಪಣೆ ವಹಿಸೋದಕ್ಕೆ ಕಾರಣ ಏನು ಅಂತ ಬಹಿರಂಗ ಪಡಿಸಿದ್ದಾರೆ. ಈ ವೇಳೆ ಮಾತಾಡಿದ ಅವರು, ಬಿಗ್ಬಾಸ್ ಶುರುವಾಗುತ್ತೆ ಅಂದ್ರೆ ಅಷ್ಟೊಂದು ಜನ ನೋಡ್ತಾರೆ ಅಂದ್ರೆ ಅದಕ್ಕೆ ಅಷ್ಟು ಇಂಪಾರ್ಟೆನ್ಸ್ ಇದೆ. ಹಾಗೇ ನೋಡಿದ್ರೆ ಜನರು ನನ್ನ ಮೇಲೆ ಇಟ್ಟಿರೋ ಪ್ರೀತಿ, ಗೌರವ ಕಾಣಿಸಿದೆ.
ನಾನು ವಾಪಸ್ ಬರೋದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬರು ನನಗೆ ಕರೆದ ರೀತಿ ಇರಬಹುದು. ಅವರು ನನ್ನ ಮೇಲೆ ಇಟ್ಟಿರೋ ಪ್ರೀತಿ ಇರಬಹುದು. ಜನ ಅಭಿಪ್ರಾಯ, ನನ್ನ ಸ್ನೇಹಿತರು ಈ ಬಗ್ಗೆ ಹೇಳಿದ್ದು, ಬಿಗ್ಬಾಸ್ ಟೀಮ್ ಪದೇ ಪದೇ ಬಂತು ಮನವೊಲಿಸಿದ್ದಕ್ಕೆ ನಾನು ಇದ್ದೇನೆ ಅಂತ ಹೇಳಿದ್ದಾರೆ.