
ಮಹಿಳಾ ಐಪಿಎಲ್ 3ನೇ ಆವೃತ್ತಿಯ ಲೀಗ್ ಪಂದ್ಯಗಳು ಮುಕ್ತಾಯ ಹಂತಕ್ಕೆ ಬರುತ್ತಿವೆ. ಡೆಲ್ಲಿ ತಂಡ ಪ್ಲೆ ಆಫ್ಗೆ ಇದಾಗಲೇ ಎಂಟ್ರಿ ನೀಡಿದೆ. ಇನ್ನೂಳಿದ ಎರಡು ಸ್ಥಾನಕ್ಕಾಗಿ ಮುಂಬೈ, ಗುಜರಾತ್, ಬೆಂಗಳೂರು ತಂಡ ಪೈಪೋಟಿ ನಡೆಸುತ್ತಿವೆ. ಆದರೆ ಈ ಹಂತದಲ್ಲಿ ಗುಜರಾತ್ ಟೇಬಲ್ ಟಾಪರ್ ಡೆಲ್ಲಿ ತಂಡವನ್ನು ಸೋಲಿಸಿ ತನ್ನ ಪ್ಲೇ ಆಫ್ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಡೆಲ್ಲಿ ವಿರುದ್ದ ನಡೆದ ಪಂದ್ಯದಲ್ಲಿ ಗುಜರಾತ್ 5 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ಮೆಗ್ ಲ್ಯಾನಿಂಗ್ (92), ಶಫಾಲಿ ವರ್ಮಾ (40) ಅವರ ಬ್ಯಾಟಿಂಗ್ ನೆರವಿನಿಂದಾಗಿ 20 ಓವರ್ಗಳಿಗೆ 177 ರನ್ಗಳನ್ನು ಕಲೆ ಹಾಕಿತ್ತು. ಗೆಲಲ್ಲೇ ಬೇಕಾದ ಪಂದ್ಯದಲ್ಲಿ ಬ್ಯಾಟಿಂಗ್ಗಿಳಿದ ಗುಜರಾತ್ ಬೆತ್ ಮೂನಿ (44), ಹರ್ಲೀನ್ ಡಿಯೋಲ್ (70) ಅಬ್ಬರದ ಬ್ಯಾಟಿಂಗ್ನಿಂದ 19.3 ಓವರ್ಗಳಲ್ಲಿ ಡೆಲ್ಲಿ ತಂಡ ನೀಡಿದ್ದ ಗುರಿಯನ್ನು ಮುಟ್ಟಿತ್ತು. ಈ ಜಯದೊಂದಿಗೆ ಗುಜರಾತ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನ ಪಡೆದುಕೊಂಡಿದೆ. ಉಳಿದ ಒಂದು ಪಂದ್ಯದಲ್ಲಿ ಗೆದ್ದರೆ ಸುಲಭವಾಗಿ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲಿದೆ.

ಅಭಿಷೇಕ್. ಎಸ್