
Yash Jets Off To The US For Family Time After Wrapping Schedules For Toxic And Ramayana
ರಾಕಿಂಗ್ ಸ್ಟಾರ್ ಯಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಖ್ಯಾತ ನಟ. ಕೆಜಿಎಫ್ ಸ್ಟಾರ್ನ ಮುಂದಿನ ಬಹುನಿರೀಕ್ಷಿತ ಚಿತ್ರಗಳಾದ ರಾಮಾಯಣ ಹಾಗೂ ಟಾಕ್ಸಿಕ್ನ ಚಿತ್ರೀಕರಣ ಭರದಿಂದ ಸಾಗಿದೆ. ಮೂಲಗಳ ಪ್ರಕಾರ, ಕಳೆದ ಕೆಲ ದಿನಗಳಿಂದ ರಾಕಿಭಾಯ್ ಮುಂಬೈನಲ್ಲಿ ಟಾಕ್ಸಿಕ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಇದೀಗ ಅಮೆರಿಕಕ್ಕೆ ತೆರಳಿದ್ದಾರೆ.
ಬ್ಯಾಕ್ ಟು ಬ್ಯಾಕ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಯಶ್ ಅವರೀಗ ಸಿನಿಮಾ ಕೆಲಸಗಳಿಗೆ ಕೊಂಚ ಬ್ರೇಕ್ ಕೊಟ್ಟು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಕುಟುಂಬದೊಟ್ಟಿಗೆ ವಿದೇಶದಲ್ಲಿ ಗುಣಮಟ್ಟದ ಸಮಯ ಕಳೆಯಲಿದ್ದಾರೆ. ಜುಲೈ 3ರಂದು ರಾಮಾಯಣ ಗ್ಲಿಂಪ್ಸ್ ರಿಲೀಸ್ ಆಗಲಿದೆ ಎಂದು ಹೇಳಲಾಗಿದ್ದು, ಅದಕ್ಕೂ ಮುನ್ನ ಮುಂಬೈ ಏರ್ಪೋರ್ಟ್ನಲ್ಲಿ ರಾಕಿಂಗ್ ಸ್ಟಾರ್ ಕಾಣಿಸಿಕೊಂಡರು.
ಬ್ಲಾಕ್ಬಸ್ಟರ್ ಕೆಜಿಎಫ್ ಚಿತ್ರದ ಮೂಲಕ ಸಿನಿಮಾ ಬ್ರ್ಯಾಂಡ್ ಆಗಿರುವ ಯಶ್ ಅವರ ಸಿನಿಮಾ ಮೇಲಿನ ಒಲವು ನಿಮಗೆ ತಿಳಿದೇ ಇದೆ. ಸಿನಿಮಾ ಬಗ್ಗೆ ಫ್ಯಾಷನೇಟೆಡ್ ಆಗಿರುವ ಯಶ್ ಒಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಕೂಡಾ ಹೌದು. ಸಿನಿಮಾ ಶೂಟಿಂಗ್ ಇಲ್ಲದ ಟೈಮಲ್ಲಿ, ಕೆಲವೊಮ್ಮೆ ಬಿಡುವು ಮಾಡಿಕೊಂಡು ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಆಗಾಗ್ಗೆ ಗುಣಮಟ್ಟದ ಸಮಯ ಕಳೆಯುತ್ತಾರೆ. ಹೆಚ್ಚಾಗಿ ಪ್ರಕೃತಿ ಸೌಂದರ್ಯ ಸವಿಯುತ್ತಾರೆ. ಇದೀಗ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ರಾಧಿಕಾ ಪಂಡಿತ್ ಹಾಗೂ ಮಕ್ಕಳು ಈಗಾಗಲೇ ಯುಎಸ್ ತಲುಪಿದ್ದರು. ಇದೀಗ ಯಶ್ ಕೂಡಾ ಅಮೆರಿಕಕ್ಕೆ ಹೋಗಿದ್ದಾರೆ.
ರಾಧಿಕಾ ಪಂಡಿತ್ ಸಹೋದರ ಅವರು ಕುಟುಂಬ ಸಮೇತ ಅಮೆರಿಕದಲ್ಲಿ ನೆಲೆಸಿದ್ದು, ಬಹುಶಃ ಯಶ್ ಫ್ಯಾಮಿಲಿ ಅವರೊಂದಿಗೆ ಸಮಯ ಕಳೆಯಲು ತೆರಳಿರಬಹುದು. ಯಶ್ ಅವರಿಗೆ ಎಷ್ಟೇ ಸಿನಿಮಾ ಒತ್ತಡಗಳಿದ್ದರೂ, ಮುದ್ದಿನ ಮಡದಿ ಹಾಗೂ ಮಕ್ಕಳಿಗೆ ಸಮಯ ಕೊಡ್ತಾರೆ ಅನ್ನೋದಕ್ಕೆ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳೋ ಫೋಟೋ ವಿಡಿಯೋಗಳೇ ಸಾಕ್ಷಿ. ಮುಂಬೈ, ದುಬೈ ಹಾಗೂ ಗೋವಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಸದ್ಯ ಮುಂಬೈ ಏರ್ಪೋರ್ಟ್ ವಿಡಿಯೋ ಆನ್ಲೈನ್ನಲ್ಲಿ ಸದ್ದು ಮಾಡುತ್ತಿದೆ.