Ashwaveega News 24×7 ಫೆಬ್ರವರಿ 17 -2026 : ರಾಜ್ಯ ರಾಜಕೀಯದಲ್ಲಿ “ಕೈ” ಸರ್ಕಾರ ಪತನವಾಗುತ್ತಾ ಎಂಬ ಚರ್ಚೆ ಮತ್ತೆ ಜೋರಾಗಿದೆ. ವಿಜಯಪುರದಲ್ಲಿ ಶಾಸಕ ಯತ್ನಾಳ್ ಹೊಸ ಬಾಂಬ್ ಸಿಡಿಸಿ ಸಂಚಲನ ಮೂಡಿಸಿದ್ದಾರೆ.
ವಿಧಾನಸಭೆ ವಿಸರ್ಜನೆ ಆದರೂ ಅಚ್ಚರಿ ಇಲ್ಲ ಎಂದು ಯತ್ನಾಳ್ ಹೇಳಿದ್ದು, ಕಾಂಗ್ರೆಸ್ ಒಳಜಗಳ ತೀವ್ರವಾಗಿದೆ ಎಂಬ ಸುಳಿವು ನೀಡಿದ್ದಾರೆ. ಸಿದ್ದು “ಕುರ್ಚಿ” ಬಿಡುವುದಿಲ್ಲ, ಡಿಕೆ ಸುಮ್ಮನೆ ಇರೋದಿಲ್ಲ ಎಂದು ಟೀಕಿಸಿದ್ದಾರೆ.
Basangouda Patil Yatnal ಅವರು ಮಾತನಾಡಿ, ಇದು D. K. Shivakumar ಅವರಿಗೆ ಕೊನೆಯ ಅವಕಾಶ. ಇನ್ಮುಂದೆ ಕಾಂಗ್ರೆಸ್ ಆಡಳಿತಕ್ಕೆ ಬರೋದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಅವರ ಹಿಂದೆ ಸಾಕಷ್ಟು ಶಾಸಕರು ಇದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರಿಗೆ ಇದು “ಡು ಆರ್ ಡೈ” ಪರಿಸ್ಥಿತಿ ಎಂದು ಹೇಳಿದ್ದಾರೆ.
ಅಧಿಕಾರ ಹಿಡಿಯಲು ಡಿಕೆಶಿ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಯತ್ನಾಳ್, ಸಿದ್ದರಾಮಯ್ಯನವರ ಮಗ ಅಷ್ಟು ಯೋಗ್ಯನಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ಬಿಎಸ್ವೈ ಮಗನಂತೆ ಈತನೂ ವಸೂಲಿ ಕಂಪನಿ ನಡೆಸುತ್ತಿದ್ದಾನೆ ಎಂದು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಈ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ನಾಯಕರು ಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಆಡಳಿತದ ಸ್ಥಿರತೆಯ ಬಗ್ಗೆ ಪ್ರಶ್ನೆ ಹುಟ್ಟಿಸಿದೆ.
ಯತ್ನಾಳ್ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗಿದ್ದು , ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ತಿರುಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.
