ಕಾಂಗ್ರೆಸ್ ಶಾಸಕ ಪಿ ರವಿಕುಮಾರ್ ಗೌಡ ಗಣಿಗ, ಕುಮಾರಸ್ವಾಮಿಯವರನ್ನು ಹಿಟ್ ಅಂಡ್ ರನ್ ಅಂತ ಮೂದಲಿಸಿರುವುದಕ್ಕೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ, ತಾನು ಬೇರೆಯವರಂತೆ ಅಶ್ಲೀಲ ವಿಡಿಯೋಗಳನ್ನು ಬಿಡಲ್ಲ, ವರ್ಗಾವಣೆ ವಿಷಯದಲ್ಲಿ ನೊಂದ ಅಧಿಕಾರಿಗಳ ಬಗ್ಗೆ ಪೆನ್ ಡ್ರೈವ್ ಬಿಡ್ತೇನೆ, ಅದನ್ನು ರೆಡಿ ಮಾಡಲು ತಾನು ವಿದೇಶಗಳಿಗೆ ಹೋಗಿಲ್ಲ ಎಂದು ಹೇಳಿದರು.
ಬೆಂಗಳೂರು: ನಗರಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಹೆಚ್ ಡಿ ರೇವಣ್ಣ (HD Revanna) ಬಂಧನ ಪ್ರಕರಣದಲ್ಲಿ ವಕೀಲರು ನಡೆಸಿದ ವಾದವಿವಾದಗಳನ್ನು ಗಮನಿಸಿದರೆ, ಕೇವಲ ದ್ವೇಷದ ರಾಜಕಾರಣ ಮತ್ತು ಹೆಚ್ ಡಿ ದೇವೇಗೌಡರ (HD Devegowda) ಹೆಸರಿಗೆ ಕಳಂಕ ಮೆತ್ತಲು ಅವರನ್ನು ಜೈಲಿಗೆ ಕಳಸಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಶಾಸಕ ಪಿ ರವಿಕುಮಾರ್ ಗೌಡ ಗಣಿಗ, ಕುಮಾರಸ್ವಾಮಿಯವರನ್ನು ಹಿಟ್ ಅಂಡ್ ರನ್ ಅಂತ ಮೂದಲಿಸಿರುವುದಕ್ಕೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ, ತಾನು ಬೇರೆಯವರಂತೆ ಅಶ್ಲೀಲ ವಿಡಿಯೋಗಳನ್ನು ಬಿಡಲ್ಲ, ವರ್ಗಾವಣೆ ವಿಷಯದಲ್ಲಿ ನೊಂದ ಅಧಿಕಾರಿಗಳ ಬಗ್ಗೆ ಪೆನ್ ಡ್ರೈವ್ ಬಿಡ್ತೇನೆ, ಅದನ್ನು ರೆಡಿ ಮಾಡಲು ತಾನು ವಿದೇಶಗಳಿಗೆ ಹೋಗಿಲ್ಲ ಎಂದು ಹೇಳಿದರು. ಪ್ರಜ್ವಲ್ ವಿಡಿಯೋಗಳ ಹಂಚಿಕೆಯಲ್ಲಿ ಹಾಸನ ಅಭ್ಯರ್ಥಿಯೇ ಶಮೀಲಾಗಿದ್ದಾರೆ, ಇವೆಲ್ಲ ಸಣ್ಣ ಸಣ್ಣ ಮೀನುಗಳು, ದೊಡ್ಡ ತಿಮಿಂಗಲವನ್ನು ಹಿಡಿದು ವಿಚಾರಣೆ ನಡೆಸಿದರೆ ಎಲ್ಲ ವಿಷಯಗಳು ಬಯಲಿಗೆ ಬರುತ್ತವೆ, ಆದರೆ ತಿಮಿಂಗಿಲ ಸರ್ಕಾರದ ಭಾಗವಾಗಿರುವುದರಿಂದ ಬಂಧಿಸುವವರು ಯಾರು? ಎಂದು ಕುಮಾರಸ್ವಾಮಿ ಹೇಳಿದರು. ದೇವರಾಜೇಗೌಡ ದೊಡ್ಡ ತಿಮಿಂಗಲದ ಜೊತೆ ನಡೆಸಿದ ಮಾತುಕತೆಯ ಆಡಿಯೋ ಬಿಡುಗಡೆ ಮಾಡಿದ್ದಕ್ಕೆ ಅವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.