Ashwaveega News 24×7 ಜನವರಿ 20 – ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಪವರ್ ಫೈಟ್ ಚರ್ಚೆ ತೀವ್ರವಾಗಿರುವ ಹೊತ್ತಲ್ಲೇ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆ ನಾನಾ ಅರ್ಥೈಸಿಕೆಗಳಿಗೆ ಕಾರಣವಾಗಿದೆ.
“ಮಾತು ಕೊಟ್ಟವರೆಲ್ಲಾ ಉಲ್ಟಾ ಹೊಡೆಯುತ್ತಾರೆ. ಈಗ ನಂಬಿಕೆ ಇಲ್ಲ. ಮಾತು ಸತ್ಯವಾಗಿರಬೇಕು” ಎಂಬ ಅವರ ಮಾತುಗಳು ಸಿಎಂ ಸಿದ್ದರಾಮಯ್ಯ ಉದ್ದೇಶಿಸಿ ಎನ್ನುವ ಚರ್ಚೆಗೆ ಆಹಾರವಾಗಿದೆ.
ಇದೇ ವೇಳೆ, “ನಾವು ಯಾರಿಗೆ ಮಾತು ಕೊಟ್ಟರೂ ಅದನ್ನು ಪಾಲಿಸುತ್ತೇವೆ. ಇದು ಕನಕಪುರದ ಮಣ್ಣಿನ ಗುಣ” ಎಂದು ಡಿಕೆಸು ಸ್ಪಷ್ಟಪಡಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿದ ಅವರು, “ಡಿಕೆಶಿ ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕಾಗಿ ಎಲ್ಲವನ್ನೂ ತಾಳ್ಮೆಯಿಂದ ನಡೆಸುತ್ತಿದ್ದಾರೆ” ಎಂದರು.
“ಅಧಿಕಾರ ಯಾರಿಗೂ ಸುಲಭವಾಗಿ ಬರುವುದಿಲ್ಲ. ಸಿಎಂ ಸ್ಥಾನ ಅಷ್ಟು ಸುಲಭವಾಗಿ ಸಿಗುವ ಹುದ್ದೆಯಲ್ಲ. ಶಾಸಕರ ಹಿತದೃಷ್ಟಿಯಿಂದ ಸಹನೆಯಿಂದ ಕಾಯುತ್ತಿದ್ದಾರೆ. ಪಕ್ಷದ ಆದೇಶಕ್ಕಾಗಿ ಡಿಸಿಎಂ ಡಿಕೆಶಿ ಕಾಯುತ್ತಿದ್ದಾರೆ” ಎಂದು ಹೇಳಿದರು … ಡಿ.ಕೆ. ಸುರೇಶ್ ಅವರ ಈ ಹೇಳಿಕೆಗಳು ಕಾಂಗ್ರೆಸ್ ಒಳರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.
