Ashwaveega News 24×7 ಜನವರಿ 24 – Gilli | Rakshita Shetty : ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟಿ ರಕ್ಷಿತಾ ಮತ್ತು ಗಿಲ್ಲಿ ನಡುವಿನ ಮುದ್ದಾದ ‘ಕೋಳಿ ಜಗಳ’ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಸಖತ್ ಸೌಂಡ್ ಮಾಡಿದ ಈ ಕ್ಷಣಗಳು ನೋಡುಗರಿಗೆ ಪಕ್ಕಾ ಎಂಟರ್ಟೈನ್ಮೆಂಟ್ ನೀಡಿವೆ.
ರಕ್ಷಿತಾ ಮಾತಾಡಲು ಮುಂದಾದಾಗಲೇ ಗಿಲ್ಲಿ ಮಧ್ಯೆ ಬಂದು ಡೈಲಾಗ್ ಮೇಲೆ ಡೈಲಾಗ್ ಹೊಡೆಯುತ್ತಿದ್ದಂತೆ, ವೇದಿಕೆಯ ಮೇಲೆಯೇ ಚಿಕ್ಕ ಜಗಳ ಶುರುವಾಗಿತ್ತು. ರಕ್ಷಿತಾ ಡೈಲಾಗ್ ತಡವರಿಸುತ್ತಿದ್ದ ಕ್ಷಣದಲ್ಲೇ ಕಾಲೆಳೆದ ಗಿಲ್ಲಿ, ಪದೇ ಪದೇ ಮೈಕ್ ಕಿತ್ಕೊಳ್ಳಲು ಟ್ರೈ ಮಾಡಿದ ದೃಶ್ಯ ಎಲ್ಲರ ಗಮನ ಸೆಳೆದಿತು.
ಇನ್ನೂ ಮಜಾ ಅಂದ್ರೆ, ಪಬ್ಲಿಕ್ ಆಗಿಯೇ ರಕ್ಷಿತಾ ಡೈಲಾಗ್ನ್ನು ಕರೆಕ್ಷನ್ ಮಾಡಿದ್ದ ಗಿಲ್ಲಿ, ಮೈಕ್ ಹಿಡಿಯಲು ಹರಸಾಹಸ ಪಟ್ಟರೂ, ಮೈಕ್ ಕೊಡದೇ ಹಠ ಹಿಡಿದ ರಕ್ಷಿತಾ ಎಲ್ಲರನ್ನೂ ನಗುವಲ್ಲಿ ಮುಳುಗಿಸಿದರು. ಇಬ್ಬರ ನಡುವಿನ ಈ ಕೋಳಿ ಜಗಳ ನೋಡಿದ ಜನ ಬಿದ್ದು ಬಿದ್ದು ನಕ್ಕಿದ್ದು, ಕಾರ್ಯಕ್ರಮದ ವಾತಾವರಣವನ್ನೇ ಲೈವ್ಲಿ ಮಾಡಿತು. ಗಿಲ್ಲಿ–ರಕ್ಷಿತಾ ನಡುವಿನ ಈ ಮುದ್ದಾದ ಜಗಳ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಫ್ಯಾನ್ಸ್ಗಳಿಂದ ಭಾರೀ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
