Ashwaveega News 24×7 ಜನವರಿ 24 -ಬೆಂಗಳೂರು : ಬಂಗಾರದ ಬೆಲೆ ಬಗ್ಗೆ ಬಲ್ಗೇರಿಯನ್ ಭವಿಷ್ಯವಾಣಿಗಾರ್ತಿ ಬಾಬಾ ವಂಗಾ ನೀಡಿದ್ದ ಭವಿಷ್ಯವಾಣಿ ಇದೀಗ ಮತ್ತೆ ಚರ್ಚೆಗೆ ಬಂದಿದೆ. 2026ರ ವೇಳೆಗೆ ಜಗತ್ತಿನಲ್ಲಿ ಭಾರೀ ಆರ್ಥಿಕ ಅಸ್ಥಿರತೆ ಉಂಟಾಗಲಿದ್ದು, ಅದರಿಂದ ಚಿನ್ನದ ಬೆಲೆ ಮುಗಿಲು ಮುಟ್ಟಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಜಾಗತಿಕ ವಿಪತ್ತುಗಳು, ಯುದ್ಧ ಭೀತಿ, ಆರ್ಥಿಕ ಅಶಾಂತಿ ಮತ್ತು ಮಾರುಕಟ್ಟೆಗಳ ಕುಸಿತದ ಪರಿಣಾಮ ಜನರು ಸುರಕ್ಷಿತ ಹೂಡಿಕೆಗಾಗಿ ಚಿನ್ನದತ್ತ ಮುಖ ಮಾಡುತ್ತಾರೆ. ಎಂಬುದು ವಂಗಾ ಅವರ ಹೇಳಿಕೆ. ಈ ಭವಿಷ್ಯವಾಣಿ ಕಳೆದ ವರ್ಷದಿಂದಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೀಗ ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಬಾಬಾ ವಂಗಾ ಅತೀಂದ್ರಿಯ ಶಕ್ತಿಯುಳ್ಳವರು,ಕಾಲಜ್ಞಾನಿ ಎಂದು ಅನೇಕರು ನಂಬಿಕೆ ಇಟ್ಟಿದ್ದಾರೆ. ಹಿಂದಿನ ಹಲವು ಭವಿಷ್ಯವಾಣಿಗಳು ನಿಜವಾಗಿರುವ ಕಾರಣ, ಈಗ ಅವರ ಬಂಗಾರದ ಭವಿಷ್ಯವಾಣಿಯೂ ಸತ್ಯವಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.ಇತ್ತ ಜಾಗತಿಕ ಮಟ್ಟದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಟ್ಯಾಕ್ಸ್ ನೀತಿ, ಆರ್ಥಿಕ ನಿರ್ಧಾರಗಳು ಹಾಗೂ ರಾಜಕೀಯ ಗೊಂದಲಗಳಿಂದಾಗಿ ಷೇರ್ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರೆದಿದೆ. ಇದರಿಂದ ಹೂಡಿಕೆದಾರರು ಷೇರ್ ಮಾರ್ಕೆಟ್ ಬಿಟ್ಟು ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಹೊಸ ವರ್ಷದ ಹೊಸ್ತಿಲಲ್ಲೇ ಪ್ರತಿ ಗ್ರಾಂ ಚಿನ್ನದ ಬೆಲೆ 15 ಸಾವಿರ ರೂಪಾಯಿ ದಾಟಿದ್ದು, ಮುಂದಿನ ದಿನಗಳಲ್ಲಿ 20 ಸಾವಿರ ರೂಪಾಯಿ ಮುಟ್ಟಬಹುದು . ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಮದುವೆ ಮತ್ತು ಶುಭ ಕಾರ್ಯಗಳ ಸೀಸನ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಯುಗಾದಿ ವೇಳೆಗೆ ಬಂಗಾರದ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದೇ ರೀತಿ ಬೆಲೆ ಏರಿಕೆ ಮುಂದುವರಿದರೆ, ಶೀಘ್ರವೇ 10 ಗ್ರಾಂ ಚಿನ್ನದ ಬೆಲೆ 2 ಲಕ್ಷ ರೂಪಾಯಿ ತಲುಪಿದರೂ ಅಚ್ಚರಿಪಡಬೇಕಾಗಿಲ್ಲ ಎಂಬ ಮಾತುಗಳು ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ. ಬಾಬಾ ವಂಗಾ ಭವಿಷ್ಯವಾಣಿ – ಚಿನ್ನದ ಬೆಲೆ ಭವಿಷ್ಯದಲ್ಲಿ ಎಲ್ಲಿ ತಲುಪಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ …
