Ashwaveega News 24×7 ಜನವರಿ 25 : ಬಂಗಾರದ ಬೆಲೆ ಕುರಿತು ಬಲ್ಗೇರಿಯನ್ ಭವಿಷ್ಯವಾಣಿಗಾರ್ತಿ ಬಾಬಾ ವಂಗಾ ಅವರ ಹೇಳಿಕೆಗಳು ಮತ್ತೆ ಸುದ್ದಿಯಾಗಿವೆ. 2026ರ ವೇಳೆಗೆ ಜಾಗತಿಕ ಆರ್ಥಿಕ ಅಸ್ಥಿರತೆ ಹೆಚ್ಚಾಗಿ, ವಿಶ್ವದಾದ್ಯಂತ ಅಲ್ಲೋಲ-ಕಲ್ಲೋಲ ಉಂಟಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಜಾಗತಿಕ ವಿಪತ್ತುಗಳ ಪರಿಣಾಮವಾಗಿ ಚಿನ್ನದ ಬೆಲೆ ಮುಗಿಲು ಮುಟ್ಟಲಿದೆ, ಬಂಗಾರದ ದರ ಡಬಲ್ ಆಗಲಿದೆ ಎನ್ನುವುದು ಈ ಭವಿಷ್ಯವಾಣಿಯ ಪ್ರಮುಖ ಅಂಶ. ಕಳೆದ ವರ್ಷದಿಂದಲೂ “ಬಾಬಾ ವಂಗಾ ಚಿನ್ನದ ಭವಿಷ್ಯ” ಎಂಬ ಸುದ್ದಿ ನಿರಂತರವಾಗಿ ಹರಿದಾಡುತ್ತಿದೆ.
ಬಲ್ಗೇರಿಯನ್ ಭವಿಷ್ಯವಾಣಿಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ, ಅತೀಂದ್ರಿಯ ಶಕ್ತಿಯುಳ್ಳ ಕಾಲಜ್ಞಾನಿ ಎಂದು ಅವರ ಅಭಿಮಾನಿಗಳು ನಂಬಿದ್ದಾರೆ. ಹಿಂದೆ ಅವರು ಹೇಳಿದ್ದ ಕೆಲವು ಭವಿಷ್ಯಗಳು ನಿಜವಾಗಿವೆ ಎಂಬ ವಾದವೂ ಇದೆ.
ಇದೀಗ, “ಶೀಘ್ರವೇ 10 ಗ್ರಾಂ ಚಿನ್ನದ ಬೆಲೆ 2 ಲಕ್ಷ ರೂಪಾಯಿ ತಲುಪುತ್ತಾ?” ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಕುತೂಹಲ ಹುಟ್ಟಿಸಿದೆ. ಆದರೆ ಆರ್ಥಿಕ ತಜ್ಞರು ಇಂತಹ ಭವಿಷ್ಯವಾಣಿಗಳನ್ನು ನೇರವಾಗಿ ನಂಬಬಾರದು, ಮಾರುಕಟ್ಟೆಯ ಚಲನೆ, ಜಾಗತಿಕ ಪರಿಸ್ಥಿತಿ ಮತ್ತು ಬೇಡಿಕೆ-ಪೂರೈಕೆ ಮೇಲೆ ಚಿನ್ನದ ಬೆಲೆ ಅವಲಂಬಿತವಾಗಿರುತ್ತದೆ ಎಂದು ಅಭಿಪ್ರಾಯಪಡುತ್ತಿದ್ದಾರೆ.
ಬಾಬಾ ವಂಗಾ ಅವರ ಈ ಭವಿಷ್ಯವಾಣಿ ನಿಜವಾಗುತ್ತದೆಯೇ? ಅಥವಾ ಇದು ಕೇವಲ ವೈರಲ್ ಸುದ್ದಿಯಷ್ಟೇನಾ? ಎಂಬುದನ್ನು ಕಾದು ನೋಡಬೇಕಿದೆ.
