Ashwaveega News 24×7 ಜನವರಿ 25 – ರಾಜ್ಯ ರಾಜಕಾರಣದಲ್ಲಿ ಮತ್ತೆ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬರ್ತಿದೆಯಾ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಬಜೆಟ್ ಅಧಿವೇಶನದ ನಂತರ ಕಾಂಗ್ರೆಸ್ ಒಳಗಡೆ ಮತ್ತೆ ‘ಪವರ್ ಶೇರಿಂಗ್’ ಕಿತ್ತಾಟ ಫಿಕ್ಸ್ ಆಗಿದೆಯೇ ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಅಧಿವೇಶನ ಮುಗಿಯುವವರೆಗೂ ಡಿಕೆ ಶಿವಕುಮಾರ್ ಬಣ ತಾತ್ಕಾಲಿಕವಾಗಿ ಸೈಲೆಂಟ್ ಆಗಿದ್ದು, ಆದರೆ ಜನವರಿ 28ರಂದು ನಡೆಯಲಿರುವ ಕಾಂಗ್ರೆಸ್ನ ಮಹತ್ವದ ಸಿಎಲ್ಪಿ ಸಭೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ CLP ಸಭೆಯ ನಂತರ, ಬಜೆಟ್ ಮುಗಿದ ತಕ್ಷಣ ಡಿಕೆಶಿ ಆಪ್ತ ಶಾಸಕರಿಂದ ರೆಬೆಲ್ ಧ್ವನಿ ಎದ್ದು ಬರಬಹುದೇ ಎಂಬ ಚರ್ಚೆ ಜೋರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಲವು ಶಾಸಕರಲ್ಲಿ ಅಸಮಾಧಾನ ವ್ಯಕ್ತವಾಗುವ ಸಾಧ್ಯತೆಯಿದೆ . ಇದೇ ವೇಳೆ, ಬಜೆಟ್ ಅಧಿವೇಶನದ ಬಳಿಕ ಹೈಕಮಾಂಡ್ ಭೇಟಿಗೆ ಡಿಕೆ ಬಣ ಪ್ಲಾನ್ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೈಕಮಾಂಡ್ ಮೇಲೆ ಒತ್ತಡ ಹಾಕಲು ಡಿಕೆಶಿ ಬಣ ತಂತ್ರ ರೂಪಿಸುತ್ತಿದೆಯೇ ? ಎಂಬ ಪ್ರಶ್ನೆಗೆ ಜೊತೆಗೆ, ಇತ್ತ ಸಿಎಂ ಸಿದ್ದರಾಮಯ್ಯ ಬಣವೂ ವರಿಷ್ಠರ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
‘ನಾಯಕತ್ವ’ ವಿಚಾರದಲ್ಲಿ ಸ್ಪಷ್ಟತೆ ನೀಡುವಂತೆ ಹೈಕಮಾಂಡ್ಗೆ ಮನವಿ ಮಾಡುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ, ಬಜೆಟ್ ಅಧಿವೇಶನ ಮುಗಿದ ಬಳಿಕ ಕಾಂಗ್ರೆಸ್ ಒಳಗೆ ಮತ್ತೆ ‘ಕುರ್ಚಿ ರಾಜಕಾರಣ’ ಭುಗಿಲೇಳುವ ಲಕ್ಷಣಗಳು ಕಾಣಿಸುತ್ತಿವೆ.
