Ashwaveega News 24×7 ಫೆಬ್ರವರಿ 2026 : ನಿರಂತರವಾಗಿ ಗಗನಕ್ಕೇರುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ದಾಖಲೆ ಮಟ್ಟ ತಲುಪಿದ್ದ ಗೋಲ್ಡ್, ಸಿಲ್ವರ್ ದರಗಳು ಇದೀಗ ಐತಿಹಾಸಿಕ ಕುಸಿತ ಕಂಡು ಜನರನ್ನು ಅಚ್ಚರಿಗೊಳಿಸಿದೆ.
ಇಂದು 10 ಗ್ರಾಂ ಚಿನ್ನದ ದರ ₹1 ಲಕ್ಷ 42 ಸಾವಿರಕ್ಕೆ ಇಳಿಕೆಯಾಗಿದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ₹2 ಲಕ್ಷ 65 ಸಾವಿರ ರೂಪಾಯಿಗೆ ಕುಸಿದಿದೆ. ಕೇವಲ ನಾಲ್ಕು ದಿನಗಳ ಹಿಂದಷ್ಟೇ ₹4 ಲಕ್ಷದ ಗಡಿ ದಾಟಿದ್ದ ಸಿಲ್ವರ್ ಬೆಲೆ, ಇದೀಗ ದಿಢೀರ್ ಅಂತಾ ಭಾರಿ ಕುಸಿತ ಕಂಡಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ದಾಖಲಾಗುತ್ತಿದ್ದು, ಹೂಡಿಕೆದಾರರು ಹಾಗೂ ವ್ಯಾಪಾರಿಗಳಲ್ಲಿ ಗೊಂದಲ ಉಂಟಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಏರುಪೇರು, ಡಾಲರ್ ಮೌಲ್ಯದ ಚಲನೆ ಮತ್ತು ಲಾಭ ಪಡೆದ ಹೂಡಿಕೆದಾರರ ಮಾರಾಟವೇ ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎನ್ನಲಾಗುತ್ತಿದೆ.
ಚಿನ್ನ, ಬೆಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಾಮಾನ್ಯ ಗ್ರಾಹಕರು ದೂರ ಉಳಿದಿದ್ದರು. ಆದರೆ ಈಗಿನ ಕುಸಿತದಿಂದಾಗಿ ಮಾರುಕಟ್ಟೆಯಲ್ಲಿ ಮತ್ತೆ ಚಿನ್ನ–ಬೆಳ್ಳಿ ಖರೀದಿಗೆ ಚೈತನ್ಯ ಮರಳುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಗೋಲ್ಡ್, ಸಿಲ್ವರ್ ರೇಟ್ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂಬ ಅಂದಾಜುಗಳು ವ್ಯಕ್ತವಾಗುತ್ತಿದ್ದು, ಹೂಡಿಕೆದಾರರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಒಟ್ಟಾರೆ, ಗಗನಕ್ಕೇರಿದ್ದ ಬಂಗಾರ–ಬೆಳ್ಳಿಗೆ ಸದ್ಯ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.
