Ashwaveega News 24×7 ಫೆಬ್ರವರಿ 2026 : ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದಿನ ದಿನ ಪೂರ್ತಿ ಹಾವು–ಏಣಿ ಆಟವೇ ಜೋರಾಗಿದೆ. ಬೆಳಗ್ಗೆಯ ಹೊತ್ತಿಗೆ 10 ಗ್ರಾಂ ಚಿನ್ನದ ದರ ₹1.40 ಲಕ್ಷಕ್ಕೆ ಇಳಿದಿದ್ದರೆ, ಮಧ್ಯಾಹ್ನದ ನಂತರ ದಿಢೀರ್ ಅಂತಾ ಗೋಲ್ಡ್ ರೇಟ್ನಲ್ಲಿ ಏರಿಕೆ ಕಂಡುಬಂದಿದೆ. ಸದ್ಯ 10 ಗ್ರಾಂ ಚಿನ್ನದ ದರ ₹1.45 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಒಂದೇ ದಿನದಲ್ಲಿ ಬಂಗಾರದ ಬೆಲೆಯಲ್ಲಿ ಸುಮಾರು 5 ಸಾವಿರ ರೂಪಾಯಿ ಜಿಗಿತ ಕಂಡಿದೆ.
ಬಂಗಾರ ಮಾತ್ರವಲ್ಲ, ಬೆಳ್ಳಿ ಬೆಲೆಯಲ್ಲೂ ಚೇತರಿಕೆ ಕಂಡುಬಂದಿದೆ. ಬೆಳಗ್ಗೆಯ ವೇಳೆಗೆ 1 ಕೆಜಿ ಬೆಳ್ಳಿ ದರ ₹2.27 ಲಕ್ಷ ರೇಂಜ್ನಲ್ಲಿ ಇದ್ದರೆ, ಮಾರುಕಟ್ಟೆ ಚೇತರಿಕೆಯಿಂದ ಸದ್ಯ ಬೆಳ್ಳಿ ದರ ₹2.47 ಲಕ್ಷಕ್ಕೆ ಏರಿಕೆಯಾಗಿದೆ.
ಮಧ್ಯಾಹ್ನದ ಬಳಿಕ ಅಂತರರಾಷ್ಟ್ರೀಯ ಮಾರುಕಟ್ಟೆಯ ಸಿಗ್ನಲ್ಗಳು, ಹೂಡಿಕೆದಾರರ ಖರೀದಿ ಒತ್ತಡ ಮತ್ತು ಶಾರ್ಟ್ ಸೆಲ್ಲಿಂಗ್ ಕವರ್ ಮಾಡುವ ಪ್ರಕ್ರಿಯೆಯೇ ಈ ಏರಿಕೆಗೆ ಕಾರಣ ಅಂತೆ. ಮಾರ್ಕೆಟ್ ಕ್ಲೋಸಿಂಗ್ ವೇಳೆಗೆ ಮತ್ತೆ ಚಿನ್ನ–ಬೆಳ್ಳಿ ದರದಲ್ಲಿ ಓಟ ಆರಂಭವಾಗಿರುವುದು ಮಾರುಕಟ್ಟೆ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕ್ಷಣಕ್ಷಣಕ್ಕೂ ಬಂಗಾರ ಮತ್ತು ಬೆಳ್ಳಿ ದರದಲ್ಲಿ ಏರುಪೇರು ನಡೆಯುತ್ತಿದ್ದು, ಮಾರುಕಟ್ಟೆ ತೀವ್ರ ಅಸ್ಥಿರತೆಯ ಹಂತದಲ್ಲಿದೆ. ಮುಂದಿನ ಕೆಲ ಗಂಟೆಗಳು ಮತ್ತು ದಿನಗಳಲ್ಲಿ ಗೋಲ್ಡ್, ಸಿಲ್ವರ್ ದರ ಯಾವ ದಿಕ್ಕು ಹಿಡಿಯುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಒಟ್ಟಾರೆ, ಕ್ರಾಶ್ ಬಳಿಕ ಚೇತರಿಕೆ ಕಂಡ ಚಿನ್ನ–ಬೆಳ್ಳಿ ಮಾರುಕಟ್ಟೆ ಮತ್ತೆ ಏರಿಕೆ ಹಾದಿ ಹಿಡಿದಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
