Ashwaveega News 24×7 ಫೆಬ್ರವರಿ 05 -2026 – ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.ಫೆಬ್ರವರಿ 9ರಿಂದ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡುವಂತೆ
ಬಿಎಂಆರ್ಸಿಎಲ್ (BMRCL) ಅಧಿಕೃತ ಆದೇಶ ಹೊರಡಿಸಿದೆ.
ಸೋಮವಾರದಿಂದಲೇ ನಮ್ಮ ಮೆಟ್ರೋ ಟಿಕೆಟ್ ದರಗಳು ಹೆಚ್ಚಾಗಲಿದ್ದು, ಪ್ರಯಾಣಿಕರ ಜೇಬಿಗೆ ಮತ್ತೊಂದು ಹೊಡೆತ ಬಿದ್ದಿದೆ. ಕಳೆದ ವರ್ಷ ಬಿಎಂಆರ್ಸಿಎಲ್ ಶೇಕಡಾ 101.5 ರಷ್ಟು ದರ ಏರಿಕೆ ಮಾಡಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.ಆ ವೇಳೆ ಪ್ರಯಾಣಿಕರ ತೀವ್ರ ವಿರೋಧದ ಬಳಿಕದರ ಏರಿಕೆಯನ್ನು 71.5 ಶೇಕಡಕ್ಕೆ ಇಳಿಸಲಾಗಿತ್ತು.
ಆದರೆ ಈಗ ಮತ್ತೆ ಶೇ.5ರಷ್ಟು ಹೊಸ ಏರಿಕೆ ಮಾಡಿರುವುದರಿಂದ, ಒಟ್ಟಾರೆ ಮೆಟ್ರೋ ಟಿಕೆಟ್ ದರ ಸುಮಾರು 76 ಶೇಕಡದ ಮಟ್ಟಕ್ಕೆ ಹೆಚ್ಚಾಗಿದೆ ಅನ್ನೋದು ಪ್ರಯಾಣಿಕರ ಆಕ್ಷೇಪ. ತೀವ್ರ ಆಕ್ರೋಶ, ವಿರೋಧದ ನಡುವೆಯೂ ಬಿಎಂಆರ್ಸಿಎಲ್ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿರುವುದು ಮೆಟ್ರೋ ಪ್ರಯಾಣಿಕರಲ್ಲಿ ಆಕ್ರೋಶ ಸ್ಫೋಟಕ್ಕೆ ಕಾರಣವಾಗಿದೆ.
