Ashwaveega News 24×7 ಫೆಬ್ರವರಿ 05 -2026 – ಬಿಗ್ಬಾಸ್ ಮನೆ ಬಿಟ್ಟರೂ ಕ್ಯಾಪ್ಟನ್ ರಘು ಮತ್ತು ಪಟಾಕಿ ರಕ್ಷಿತಾ ಅವರ ಕಮಾಲ್ ಮಾತ್ರ ಇನ್ನೂ ಮುಂದುವರಿದೇ ಇದೆ. ಬಿಗ್ಬಾಸ್ ಮುಗಿದ ತಕ್ಷಣವೇ
ಕ್ಯಾಪ್ಟನ್ ರಘು ತಮ್ಮದೇ ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ್ದಾರೆ. ಚಾನೆಲ್ ಹೆಸರು – “ಮ್ಯೂಟೆಂಟ್ ಚೆಫ್”.
ರಘು ಅವರ ಈ ಕನಸಿಗೆ ಪಟಪಟ ಮಾತಿನ ಪಟಾಕಿ ರಕ್ಷಿತಾ ಕೂಡ ಫುಲ್ ಸಾಥ್ ಕೊಟ್ಟಿದ್ದಾರೆ.
ಒಂದೇ ವಿಡಿಯೋ… ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಆಗಿದೆ .
“ಮ್ಯೂಟೆಂಟ್ ಚೆಫ್” ಚಾನೆಲ್ನ ಮೊದಲ ಫುಡ್ ವಿಡಿಯೋಗೆ ಈಗಾಗಲೇ 6.5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿದ್ದು, ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಘು–ರಕ್ಷಿತಾ ಜೋಡಿ ಮತ್ತೆ ಕಮಾಲ್ ಮಾಡ್ತಿದೆ. ತಮ್ಮ ಬಾಂಧವ್ಯ, ಪಟಪಟ ಮಾತು, ನ್ಯಾಚುರಲ್ ಕೇಮಿಸ್ಟ್ರಿಯಿಂದಲೇ ಇಬ್ಬರೂ ಮನಗೆದ್ದಿದ್ದಾರೆ.
ಬಿಗ್ಬಾಸ್ ಮನೆಯೊಳಗೇ ಇದ್ದಾಗಲೇ “ನಾನು ಕಿಚನ್ ಚಾನೆಲ್ ಓಪನ್ ಮಾಡ್ತೀನಿ” ಅಂತ
ಕ್ಯಾಪ್ಟನ್ ರಘು ಕನಸು ಬಿಚ್ಚಿಟ್ಟಿದ್ದರು. ಮ್ಯೂಟೆಂಟ್ ರಘುಗೆ ಫುಡ್ ಬಗ್ಗೆ ತುಂಬಾ ಇಂಟ್ರೆಸ್ಟ್.
ಆಹಾರ, ಡಯಟ್, ಫಿಟ್ನೆಸ್ ಬಗ್ಗೆ ಮಾಹಿತಿ ಕೊಡ್ತೀನಿ ಅಂತ
ಬಿಗ್ಬಾಸ್ನಲ್ಲೇ ಹೇಳಿದ್ದರು.
ಇದೀಗ ಫ್ರೀಯಾಗ್ತಿದ್ದಂತೆ ಆ ಕನಸಿಗೆ ರಿಯಾಲಿಟಿ ಶೇಪ್ ಸಿಕ್ಕಿದೆ. ಅಣ್ಣನ ಕನಸಿಗೆ ಈಗ ತಂಗಿ ರಕ್ಷಿತಾ ಕೂಡ ಕೈ ಜೋಡಿಸಿದ್ದಾರೆ. ಪಟಪಟ ಮಾತು, ನಗುವಿನ ಟ್ಯೂನಿಂಗ್, ಕಿಚನ್ನಲ್ಲಿ ಕಾಮಿಡಿ –
ರಘು & ರಕ್ಷಿತಾ ಮತ್ತೆ ಸೋಷಿಯಲ್ ಮೀಡಿಯಾದ ಟ್ರೆಂಡಿಂಗ್ ಜೋಡಿ!
