Ashwaveega News 24×7 ಫೆಬ್ರವರಿ 05 -2026 – ಮೈಸೂರು : ಬಿಗ್ಬಾಸ್ ಖ್ಯಾತಿಯ ರಜತ್ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ಸಿಗರೇಟ್ ಸೇವಿಸುತ್ತಾ ಫೋಟೋಶೂಟ್ ಮಾಡಿಸಿಕೊಂಡಿರುವುದು ಇದೀಗ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಪಾರಂಪರಿಕ ಮಹತ್ವ ಹೊಂದಿರುವ ಕಟ್ಟಡದ ಮುಂದೆ ಕಾರಿನಿಂದ ಇಳಿಯುತ್ತಾ, ಸಿಗರೇಟ್ ಸೇದುತ್ತಿರುವ “ವಿಲನ್” ಶೈಲಿಯ ರೆಟ್ರೋ ಲುಕ್ನಲ್ಲಿ ರಜತ್ ಪೋಸ್ ನೀಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವಿಡಿಯೋ ವನ್ನು ರಜತ್ ತಾನೇ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ನಿಷೇಧವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಕೇವಲ ಶೋಕಿಗಾಗಿ ಮತ್ತು ರೀಲ್ಸ್ ವೈರಲ್ ಮಾಡಲು ಈ ರೀತಿಯ ವರ್ತನೆ ತೋರಿರುವುದು ಅಸಹ್ಯಕರ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರಜತ್ ಈ ಹಿಂದೆ ಸಾರ್ವಜನಿಕವಾಗಿ ಮಚ್ಚು ಪ್ರದರ್ಶಿಸಿ ಗಂಭೀರ ವಿವಾದ ಸೃಷ್ಟಿಸಿದ್ದಲ್ಲದೆ, ಅದಕ್ಕಾಗಿ ಜೈಲು ಪಾಲಾಗಿದ್ದ ಹಿನ್ನೆಲೆಯೂ ಇದೆ. ಜೈಲು ಅನುಭವದ ನಂತರವೂ ಯಾವುದೇ ಪಾಠ ಕಲಿಯದೆ ಮತ್ತೆ ಮತ್ತೆ ಕಾನೂನು ಹಾಗೂ ಸಾಮಾಜಿಕ ಮೌಲ್ಯಗಳನ್ನು ಲೆಕ್ಕಿಸದೇ ವರ್ತಿಸುತ್ತಿರುವುದು ಸರಿಯಲ್ಲ …
ಪಾರಂಪರಿಕ ಕಟ್ಟಡಗಳ ಬಳಿ ಇಂತಹ ವರ್ತನೆಗೆ ಅವಕಾಶ ನೀಡಬಾರದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
