Ashwaveega News 24×7 ಫೆಬ್ರವರಿ 06 -2026 – ಗ್ರಾಮ ಪಂಚಾಯ್ತಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗೆ ಹೊಸ ತೀರ್ಮಾನ ಇನ್ಮುಂದೆ ಮತ ಹಾಕೋದಕ್ಕೆ ಇವಿಎಂ ಇರೋದಿಲ್ಲ. ವಿದ್ಯುನ್ಮಾನ ಮತ ಯಂತ್ರಗಳನ್ನ ಕೈಬಿಟ್ಟಿರುವ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆಗೆ ಅಧಿಕೃತ ತೀರ್ಮಾನ ಕೈಗೊಂಡಿದೆ.
ರಾಜ್ಯಾದ್ಯಂತ 31 ಜಿಲ್ಲೆ, 240 ತಾಲೂಕು, 187 ನಗರ, 5,975 ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಯಲಿದೆ. ಗ್ರಾಮ ಪಂಚಾಯ್ತಿ, ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಲೋಕಲ್ ವಾರ್ಗಳಿಗೆ ಇನ್ಮುಂದೆ ಇವಿಎಂಗೆ ಗುಡ್ಬೈ ಹೇಳಲಾಗಿದೆ.
ಇವಿಎಂ (EVM) ಮೂಲಕ ಮತಗಳ್ಳತನ ಆಗ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ದೇಶಾದ್ಯಂತ ಮಾಡುತ್ತಾ ಬಂದಿದ್ದಾರೆ. ಇವಿಎಂ ಮೇಲಿನ ಅನುಮಾನ, ಪಾರದರ್ಶಕತೆ ಕೊರತೆ ಮತ್ತು ವಿಶ್ವಾಸದ ಅಭಾವವೇ ಈ ನಿರ್ಧಾರಕ್ಕೆ ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದೇ ಹಿನ್ನಲೆಯಲ್ಲಿ, ರಾಜ್ಯದಲ್ಲಿ ಇವಿಎಂ ಬಳಕೆಗೆ ಬ್ರೇಕ್ ಹಾಕಿ,ಬ್ಯಾಲೆಟ್ ಪೇಪರ್ಗೆ ಮೊರೆ ಹೋಗಿದೆ ಸಿದ್ದರಾಮಯ್ಯ ಸರ್ಕಾರ ಅಂತನೇ ಹೇಳಬಹುದು .
ವಿಧಾನಸಭೆ ಕಲಾಪದಲ್ಲಿ ಮಸೂದೆ ಮಂಡನೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆ ಹಾಗೂ GBA (ಗ್ರಾಮ ಮಟ್ಟದ ಸಂಘಟನೆ) ಎಲೆಕ್ಷನ್ಗೂ ಬ್ಯಾಲೆಟ್ ಪೇಪರ್ ಬಳಕೆ ಮಾಡುವ ತೀರ್ಮಾನಕ್ಕೂ ಒಪ್ಪಿಗೆ ಸಿಕ್ಕಿದೆ.
ರಾಜಕೀಯ ವಲಯದಲ್ಲಿ ಚರ್ಚೆ ಇವಿಎಂ ವಿರೋಧದ ಈ ಹೆಜ್ಜೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಈ ತೀರ್ಮಾನ ರಾಷ್ಟ್ರೀಯ ಮಟ್ಟದ ಚರ್ಚೆಯಾಗಿ ವಿಸ್ತರಿಸಬಹುದೆ ಎಂಬ ಕುತೂಹಲವೂ ಹೆಚ್ಚಿದೆ.
ಒಟ್ಟಿನಲ್ಲಿ, ಈಗ ಲೋಕಲ್ ವಾರ್ಗೆ ಇವಿಎಂಗೆ ಕೊಕ್ ಕೊಟ್ಟ ಸರ್ಕಾರ, ಬ್ಯಾಲೆಟ್ ಪೇಪರ್ ಮೂಲಕ ಪಾರದರ್ಶಕ ಚುನಾವಣೆ ನಡೆಸೋ ಘೋಷಣೆ ಮಾಡಿದೆ.
