Ashwaveega News 24×7 ಫೆಬ್ರವರಿ 06 -2026 – ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಅಶ್ವವೇಗ ನ್ಯೂಸ್ ಎಕ್ಸ್ಕ್ಲೂಸಿವ್ ವರದಿ, ಇದೀಗ ದಿಲ್ಲಿಯ ಹೈಕಮಾಂಡ್ವರೆಗೂ ತಲುಪಿದೆ. ಯಾರೂ ಟಚ್ ಮಾಡದ ವಿಷಯವನ್ನು ಮೊದಲ ಬಾರಿ ಬಿತ್ತರಿಸಿದ್ದೇ ಅಶ್ವವೇಗ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
“ಕೈ” ಪಡೆ ಒಳಗೆ ನಡೆಯುತ್ತಿರುವ ಕ್ರಾಂತಿಯ ಸುಳಿವನ್ನು ಅಶ್ವವೇಗ ಬ್ರೇಕ್ ಮಾಡುತ್ತಿದ್ದಂತೆ, ರಾಜ್ಯ ಕಾಂಗ್ರೆಸ್ನಲ್ಲಿ ಏನಾಗ್ತಿದೆ ಎಂಬ ಬಗ್ಗೆ ವರಿಷ್ಠರು ಗಂಭೀರ ಚರ್ಚೆಗೆ ಇಳಿದಿದ್ದಾರೆ . ವರದಿ ಪ್ರಸಾರವಾದ ತಕ್ಷಣವೇ ರಾಜ್ಯ ನಾಯಕರಿಗೆ ಅವಸರದಲ್ಲೇ ಫೋನ್ ಕಾಲ್ಗಳು ಹೋಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ, 90ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾಗೆ ಫಾರಿನ್ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರು ಎಂಬ ಸ್ಟೋರಿಯನ್ನು ಅಶ್ವವೇಗ ನ್ಯೂಸ್ ಬಹಿರಂಗಪಡಿಸಿತ್ತು. “ಕೈ” ಶಾಸಕ ಹೆಚ್.ಡಿ. ತಮ್ಮಯ್ಯ ಅವರ ಪತ್ರ ಸಮೇತ ಈ ವರದಿಯನ್ನು ಪ್ರಸಾರ ಮಾಡಲಾಗಿತ್ತು.
ಕಾಂಗ್ರೆಸ್ ಪಾಳಯದ ಒಳಚರಿತ್ರೆಯನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ ಅಶ್ವವೇಗ ವರದಿ ಬೆನ್ನಲ್ಲೇ, ಹೈಕಮಾಂಡ್ ಅಲರ್ಟ್ ಆಗಿದೆ. ‘ಕ್ರಾಂತಿ’ಯ ಸುಳಿವು ಸಿಗುತ್ತಿದ್ದಂತೆ ಎಲ್ಲ ಚಟುವಟಿಕೆಗಳ ಮೇಲೆ ವರಿಷ್ಠರು ಬ್ರೇಕ್ ಹಾಕಿದ್ದಾರೆ .
ಶಾಸಕರ ನಡೆ-ನುಡಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೈ ಹೈಕಮಾಂಡ್ ಈ ಬಾರಿ ಫುಲ್ ಸೀರಿಯಸ್ ಆಗಿದೆ . “ನಾಯಕತ್ವ ಜಟಾಪಟಿ” ನಡೆಯುತ್ತಿರುವ ನಡುವೆಯೇ ಇಂತಹ ಪ್ರವಾಸಗಳು ಮತ್ತೊಂದು ಗೊಂದಲಕ್ಕೆ ಕಾರಣವಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ . ಯಾವುದೇ ಫಾರಿನ್ ಪ್ರವಾಸಕ್ಕೂ ತಕ್ಷಣವೇ ಬ್ರೇಕ್ ಹಾಕುವಂತೆ ಹುಕುಂ ನೀಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ವರಿಷ್ಠರ ಸೂಚನೆ ಬೆನ್ನಲ್ಲೇ ಶಾಸಕರ ಫಾರಿನ್ ಟ್ರಿಪ್ ಸಂಪೂರ್ಣವಾಗಿ ಕ್ಯಾನ್ಸಲ್ ಆಗಿದೆ. ಅಶ್ವವೇಗ ನ್ಯೂಸ್ ವರದಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಿದ್ದು, ಕಾಂಗ್ರೆಸ್ ಪಾಳಯದಲ್ಲಿ ಮತ್ತಷ್ಟು ಬೆಳವಣಿಗೆಗಳಿಗೆ ವೇದಿಕೆ ಸೃಷ್ಟಿಸಿದೆ.
