Ashwaveega News 24×7 ಫೆಬ್ರವರಿ 06 -2026 : ವಿಶ್ವದ ನೆಮ್ಮದಿಯನ್ನು ಮತ್ತೊಮ್ಮೆ ಕದಡುವ ಬೆಳವಣಿಗೆಯಲ್ಲಿ, ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಶಾಂತಿ ಬಗ್ಗೆ ಮಾತಾಡುತ್ತಲೇ ಯುದ್ಧದ ಸಂದೇಶ ನೀಡುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ನರು ತಕ್ಷಣ ಇರಾನ್ ದೇಶವನ್ನು ಬಿಟ್ಟು ಹೊರಡುವಂತೆ ಸೂಚನೆ ನೀಡಿದ್ದಾರೆ.
ಈ ಸೂಚನೆಗಳು ಇರಾನ್ ಮೇಲೆ ಯಾವುದೇ ಕ್ಷಣದಲ್ಲಿ ಅಮೆರಿಕಾ ದಾಳಿ ನಡೆಯಬಹುದು ಎಂಬ ಮುನ್ಸೂಚನೆ ನೀಡುತ್ತಿವೆ .ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಗುವುದೇ ಈ ಪ್ರದೇಶ ಎಂಬ ಪ್ರಶ್ನೆಗಳು ಮೂಡಿವೆ.
ಇರಾನ್ ವಿರುದ್ಧ ಅಮೆರಿಕಾ ನೇರ ದಾಳಿ ನಡೆಸಿದರೆ, ಅದು ಕೇವಲ ಎರಡು ರಾಷ್ಟ್ರಗಳ ನಡುವಿನ ಸಂಘರ್ಷವಾಗದೆ, ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುವ ಯುದ್ಧವಾಗುವ ಸಾಧ್ಯತೆ ಇದೆ. ಕೆಲವರು ಇದನ್ನು ಮೂರನೇ ಮಹಾಯುದ್ಧಕ್ಕೆ ಮುನ್ನುಡಿಯಾಗುವ ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಗ್ಲೋಬಲ್ ಮಾರ್ಕೆಟ್ ಮತ್ತೆ ಶೇಕ್ ಆಗುವುದು ಫಿಕ್ಸ್ ಅಂತೆ . ಯುದ್ಧದ ಭೀತಿ ಹೆಚ್ಚಾದಂತೆ, ಹೂಡಿಕೆದಾರರು ಸುರಕ್ಷಿತ ಹೂಡಿಕೆಗೆ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ.
ಅದರ ಪರಿಣಾಮವಾಗಿ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಗಗನಕ್ಕೇರುವ ಸಾಧ್ಯತೆ ಇದೆ . ಜಿಯೋಪಾಲಿಟಿಕಲ್ ಟೆನ್ಶನ್ ಹೆಚ್ಚಾದರೆ, ಚಿನ್ನ–ಬೆಳ್ಳಿ ರೇಟ್ ಡಬಲ್ ಆಗುವ ಮಟ್ಟಕ್ಕೂ ಹೋಗಬಹುದು ಎಂಬ ಎಚ್ಚರಿಕೆ ಕೇಳಿಬರುತ್ತಿದೆ.
ಒಟ್ಟಿನಲ್ಲಿ, ಇರಾನ್–ಅಮೆರಿಕಾ ಸಂಘರ್ಷದ ನೆರಳು ವಿಶ್ವ ಆರ್ಥಿಕತೆಯ ಮೇಲೆ ಮತ್ತೆ ಆವರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಬೆಳವಣಿಗೆಗಳತ್ತ ಜಾಗತಿಕ ಸಮುದಾಯದ ಕಣ್ಣು ನೆಟ್ಟಿದೆ.
