Ashwaveega News 24×7 ಫೆಬ್ರವರಿ 06 -2026 – ಬೆಂಗಳೂರು : ಸ್ಯಾಂಡಲ್ವುಡ್ನ ಡಿ-ಬಾಸ್ ದರ್ಶನ್ ಅವರ ಪತ್ನಿ, ಸೆಲೆಬ್ರಿಟಿಗಳ ಮೆಚ್ಚಿನ ಅತ್ತಿಗೆ ಎಂದು ಗುರುತಿಸಲ್ಪಡುವ ವಿಜಯಲಕ್ಷ್ಮಿ ದರ್ಶನ್ ಸಂಬಂಧಿಸಿದಂತೆ ಇದೀಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ವಿಜಯಲಕ್ಷ್ಮಿ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸ್ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಒಂದು ಕಡೆ ಅಶ್ಲೀಲ ಕಾಮೆಂಟ್ ಪ್ರಕರಣ, ಮತ್ತೊಂದು ಕಡೆ ಮನೆಯೊಳಗಿನ ಹಣ ಕಳ್ಳತನ ಪ್ರಕರಣ – ಈ ಎರಡೂ ಕೇಸ್ಗಳಲ್ಲಿ ವಿಜಯಲಕ್ಷ್ಮಿ ವಿಚಾರಣೆಗೆ ಹಾಜರಾಗದೇ, ಪೊಲೀಸ್ ನೊಟೀಸ್ಗಳಿಗೆ ಸ್ಪಂದಿಸದೆ ಇರುವುದರಿಂದ ತನಿಖೆ ಅಡ್ಡಿಪಡುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಶ್ಲೀಲ ಕಾಮೆಂಟ್ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ದೂರುದಾರರ ಹೇಳಿಕೆ ಅತ್ಯಗತ್ಯ. ಆದರೆ, ಪದೇಪದೇ ನೊಟೀಸ್ ನೀಡಿದರೂ ವಿಜಯಲಕ್ಷ್ಮಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ …
ಅದೇ ರೀತಿ, ಮನೆಯಿಂದ ಹಣ ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಪ್ರಕರಣದಲ್ಲಿಯೂ ವಿಚಾರಣೆಗೆ ಗೈರಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ದೂರುದಾರರ ಸಹಕಾರವಿಲ್ಲದೆ ತನಿಖೆ ಮುಂದುವರಿಸುವುದು ಕಷ್ಟಕರವಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.
ಪದೇ ಪದೇ ನೊಟೀಸ್ ಕಳುಹಿಸಿ ಕಳುಹಿಸಿ ದರ್ಶನ್ ಪತ್ನಿಗೆ ನೊಟೀಸ್ ನೀಡುವುದರಲ್ಲಿ ಪೊಲೀಸರೂ ಸುಸ್ತಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ .
