Ashwaveega News 24×7 ಫೆಬ್ರವರಿ 08 -2026 – ಬಾಗಲಕೋಟ: ಬಾಗಲಕೋಟ ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮೂವರು ಪುಟ್ಟ ಮಕ್ಕಳ ಮೇಲೆ ಶ್ವಾನಗಳು ದಾಳಿ ನಡೆಸಿದ ಘಟನೆ ಜನರಲ್ಲಿ ಭೀತಿ ಮೂಡಿಸಿದೆ.
ನಗರದ ರಾಮದೇವ ಗಲ್ಲಿ, ತುಪ್ಪದ ಗಲ್ಲಿ ಹಾಗೂ ಶಿಕ್ಕಲಗಾರ ಪ್ರದೇಶಗಳಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಈ ದಾಳಿಯಲ್ಲಿ ಬಾಗೋಜಿ (5), ಪ್ರಭು (6) ಹಾಗೂ ರೇಖಾ ಶಿಕ್ಕಲಗಾರ ಗಾಯಗೊಂಡಿದ್ದಾರೆ.
ಗಾಯಗೊಂಡ ಮೂವರು ಮಕ್ಕಳನ್ನು ತಕ್ಷಣವೇ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಕ್ಕಳ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ .
ಘಟನೆ ಬಳಿಕ ಪೋಷಕರು ಮಕ್ಕಳ ಸುರಕ್ಷತೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಬೀದಿನಾಯಿಗಳ ಸಂಖ್ಯೆ ನಿಯಂತ್ರಿಸಲು ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೀದಿನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿರುವುದರಿಂದ ಜನಸಾಮಾನ್ಯರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.
