Ashwaveega News 24×7 ಫೆಬ್ರವರಿ 10 -2026 – ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ (GBA) ಚುನಾವಣೆ ಘೋಷಣೆಗೆ ಮುನ್ನವೇ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಆರಂಭವಾಗಿದೆ . ಬಿಜೆಪಿ –ಕಾಂಗ್ರೆಸ್–ಜೆಡಿಎಸ್ ಮೂರು ಪಕ್ಷಗಳೂ ಈ ಬಾರಿ ರಣತಂತ್ರವನ್ನೇ ಬದಲಿಸಿದ್ದು, ಪ್ರಭಾವಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡುವ ಸಾಧ್ಯತೆ ದಟ್ಟವಾಗಿದೆ.
ಮೂರ್ನಾಲ್ಕು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಹಿರಿಯ ನಾಯಕರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನವಾಗಿದ್ದು, ಯುವ ಮತದಾರರತ್ತ ಪಕ್ಷಗಳ ಚಿತ್ತ ನೆಟ್ಟಿದೆ. ವಿಶೇಷವಾಗಿ ಝೆನ್ Z ಮತ್ತು ಯುವ ವರ್ಗವನ್ನು ಸೆಳೆಯಲು ಹೊಸ ಮುಖಗಳಿಗೆ ಆದ್ಯತೆ ನೀಡುವ ನಿರ್ಧಾರ ಬಹುತೇಕ ಫಿಕ್ಸ್ ಆಗಿದೆ.
ಮೂರು ಪಕ್ಷಗಳಲ್ಲೂ ಯೂತ್ ವಿಂಗ್ನಲ್ಲಿ ಸಕ್ರಿಯರಾಗಿರುವವರಿಗೆ ಈ ಬಾರಿ ಬಂಪರ್ ಚಾನ್ಸ್ ಸಿಗುವ ಲಕ್ಷಣ ಕಾಣಿಸುತ್ತಿದೆ . ಹೊಸ ನಾಯಕತ್ವ ನಿರ್ಮಾಣ , ಗ್ರಾಸ್ರೂಟ್ ಲೆವೆಲ್ನಲ್ಲಿ ಕೆಲಸ ಮಾಡಿರುವ ಯುವ ಮುಖಗಳನ್ನು ಮುಂದಿಟ್ಟು ಬೆಂಗಳೂರು ಸಮರ ಗೆಲ್ಲುವ ಮೆಗಾ ಪ್ಲಾನ್ ರೂಪಿಸಲಾಗುತ್ತಿದೆ. ಹಿರಿಯರಿಗೆ ಕೊಕ್ ಕೊಟ್ಟು, ಯುವಕರಿಗೆ ಬಹುಪಾಲು ಟಿಕೆಟ್ ಮೀಸಲು ಮಾಡುವ ಚರ್ಚೆ ಪಕ್ಷದೊಳಗೆ ಭಾರೀ ಜೋರಾಗಿದ್ದು, ಹೊಸ ಮುಖಗಳಿಗೆ ಟಿಕೆಟ್ ನೀಡೋದು ಫಿಕ್ಸ್ ಅನ್ನೋ ಮಾತು ರಾಜಕೀಯ ವಲಯದಲ್ಲಿ ಹರಿದಾಡ್ತಿದೆ.
ಎಲೆಕ್ಷನ್ ಸಮೀಪಿಸುತ್ತಿದ್ದಂತೆ ವಾರ್ಡ್ಗಳಲ್ಲಿ ಕಚೇರಿಗಳು ಓಪನ್ ಆಗುತ್ತಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಮಾರಂಭಗಳಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ಶಿವರಾತ್ರಿ ಹಬ್ಬದ ಪ್ರಯುಕ್ತ ಲಕ್ಷಾಂತರ ರೂಪಾಯಿ ವೆಚ್ಚ . ಹಬ್ಬ ಉತ್ಸವ ಜಾಗರಣೆ ಹೀಗೆ ಮತದಾರರ ಮನಗೆಲ್ಲುವ ತಂತ್ರ ಮಾಡುತ್ತಿದ್ದಾರೆ .
ಒಟ್ಟಾರೆ, ಈ ಬಾರಿ GBA ಚುನಾವಣೆಯಲ್ಲಿ ಹಳೆಯ ಮುಖಗಳಿಗೆ ಶಾಕ್, ಹೊಸ ಮುಖಗಳಿಗೆ ಅವಕಾಶ ಎನ್ನುವ ಸ್ಪಷ್ಟ ಸಂದೇಶ ರಾಜಕೀಯ ವಲಯದಿಂದ ಹೊರಬರುತ್ತಿದೆ.
