Ashwaveega News 24×7 ಫೆಬ್ರವರಿ 10 -2026 – ರಾಜ್ಯ ರಾಜಕಾರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಮುಂದೆ ತಮ್ಮ ಬಲ ಪ್ರದರ್ಶನಕ್ಕೆ ಹೊಸ ಪ್ಲಾನ್ ರೂಪಿಸಿಕೊಂಡಿದ್ದಾರಾ ಎಂಬ ಅನುಮಾನಗಳು ಗಟ್ಟಿಯಾಗುತ್ತಿವೆ.
ಹೈಕಮಾಂಡ್ ಭೇಟಿಗಾಗಿ ಡಿಕೆಶಿ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಂತೆಯೇ, ಆ ಪ್ರಯಾಣದ ಸುತ್ತಲೂ ಹಲವು ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ. ಅದಕ್ಕೂ ಮೊದಲು ಆನೇಕಲ್ ಶಾಸಕ ಶಿವಣ್ಣ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಶಿವಣ್ಣ, ಡಿಕೆಶಿ ದೆಹಲಿ ಪ್ರವಾಸಕ್ಕೂ ಮುನ್ನವೇ ರಾಜಧಾನಿಗೆ ಹೋಗಿರುವುದು ಕೇವಲ ಸಂಯೋಗವೇ ? ಅಥವಾ “ಮುಂದೆ ಡಿಕೆ.. ಹಿಂದೆ ನಮ್ಮ ತಂಡ” ಎನ್ನುವ ಸಂದೇಶವನ್ನು ಹೈಕಮಾಂಡ್ಗೆ ರವಾನಿಸುವ ತಂತ್ರವೇ ? ಆನೇಕಲ್ ಶಾಸಕ ಶಿವಣ್ಣ ಅವರ ದೆಹಲಿ ಟೂರ್, ಡಿಕೆಶಿ ಬಲ ಪ್ರದರ್ಶನದ ಭಾಗವೇ ಎನ್ನುವ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ಜೋರಾಗಿವೆ.
ಒಂದೆಡೆ ಸಿಎಂ ಸ್ಥಾನ, ಇನ್ನೊಂದೆಡೆ ಪಕ್ಷದ ಒಳರಾಜಕೀಯ – ಈ ಎಲ್ಲದ ನಡುವೆ ಡಿಕೆಶಿ ತಮ್ಮ ಬೆಂಬಲಿಗರನ್ನು ಒಟ್ಟುಗೂಡಿಸುವ ಕಾರ್ಯಕ್ಕೆ ಇಳಿದಿದ್ದಾರಾ ? “ಮುಂದೆ ಹೋಗ್ತೀನಿ.. ಹಿಂದೆ ನೀವ್ ಬನ್ನಿ” ಅನ್ನೋ ಸಂದೇಶವನ್ನು ಡಿಕೆಶಿ ಪರೋಕ್ಷವಾಗಿ ತಮ್ಮ ಬೆಂಬಲಿಗರಿಗೆ ರವಾನಿಸಿದ್ದಾರಾ ಎಂಬ ಪ್ರಶ್ನೆ ಇದೀಗ ರಾಜಕೀಯ ಹಾದಿಯಲ್ಲಿ ಪ್ರತಿಧ್ವನಿಸುತ್ತಿದೆ.
ಹೈಕಮಾಂಡ್ ಭೇಟಿಯ ನಂತರ ಡಿಕೆಶಿ ಕೈಯಲ್ಲಿ ಏನು ಸಿಗಲಿದೆ ? ಶಾಸಕ ಶಿವಣ್ಣರ ದೆಹಲಿ ಪ್ರವಾಸದ ನಿಜವಾದ ಅರ್ಥವೇನು ? ದೆಹಲಿಯ ಉತ್ತರವೇ ರಾಜ್ಯ ರಾಜಕಾರಣದ ಮುಂದಿನ ದಿಕ್ಕು ನಿರ್ಧರಿಸಲಿದೆ.
