Ashwaveega News 24×7 ಫೆಬ್ರವರಿ 14 -2026 -ಬೆಂಗಳೂರು : ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರ ತಂಗಿಯ ಪುತ್ರ ಹಾಗೂ ನಿರ್ದೇಶಕ ಸಂತೋಷ್ ಕುಮಾರ್ ಅವರ ನಾಲ್ಕನೇ ನಿರ್ದೇಶನದ ಚಿತ್ರ “ಯುವ ಸರ್ಕಾರ್” ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಯೂತ್ ಕೇಂದ್ರೀಕೃತ ಕಥಾ ವಸ್ತುವಿನೊಂದಿಗೆ ಮೂಡಿಬರುತ್ತಿರುವ ಈ ಚಿತ್ರದ ಟೀಸರ್ ಅನ್ನು ವೀಕ್ಷಿಸಿದ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
“ಸಂತೋಷ್ ನಮ್ಮ ಚಿಕ್ಕಮ್ಮನ ಮಗ. ಯುವಜನತೆಗೆ ಹತ್ತಿರವಾಗುವ ಉತ್ತಮ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಅವರಿಗೆ ಶುಭವಾಗಲಿ,” ಎಂದು ಶಿವಣ್ಣ ತಿಳಿಸಿದ್ದಾರೆ.

ಪ್ರೇಮಿಗಳ ದಿನದ ಅಂಗವಾಗಿ ಚಿತ್ರದ ರೊಮ್ಯಾಂಟಿಕ್ ಹಾಡನ್ನು ಎಸ್.ಎ. ಚಿನ್ನೇಗೌಡ ಹಾಗೂ ಎಸ್.ಎ. ಗೋವಿಂದರಾಜ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಂತರ ಚಿತ್ರದ ಟೀಸರ್ ಅನ್ನು ಭಾಮ ಹರೀಶ್, ಎ. ಗಣೇಶ್ ಹಾಗೂ ಮಾಧವಿ ಬಿಡುಗಡೆ ಮಾಡಿದರು.

ಚಿತ್ರದಲ್ಲಿ ವೀರೇನ್ ಕೇಶವ್ ನಾಯಕನಾಗಿ ಅಭಿನಯಿಸಿದ್ದು, ನಾಯಕಿಯರಾಗಿ ಜಾಹ್ನವಿ, ಶೃತಿ ದೇಶಪಾಂಡೆ ಹಾಗೂ ಅಲ್ಫಿಯಾ ನಟಿಸಿದ್ದಾರೆ. ನಟ ಧರ್ಮಕೀರ್ತಿರಾಜ್ ಹಾಗೂ ಅವರ ತಂದೆ ಕೀರ್ತಿರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಸಂತೋಷ್ ಕುಮಾರ್ ಮಾತನಾಡಿ, “ಇದು ತಾಯಿ–ಮಗನ ಮಧ್ಯೆ ನಡೆಯುವ ಎಮೋಷನಲ್ ಕಥೆ. ತಮಿಳಿನಲ್ಲಿ ‘ಯುವನ್ ರಾಬಿನ್ ಹುಡ್’, ಹಿಂದಿಯಲ್ಲಿ ‘ಯುವ ಸರ್ಕಾರ್’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿದ್ದೇವೆ. ತಾಯಿ ಮಗನನ್ನು ಗಾಂಧಿಯಂತೆ ಬೆಳೆಸುತ್ತಾಳೆ. ಆದರೆ ಆತ ಈ ಕಾಲಘಟ್ಟದಲ್ಲಿ ಗಾಂಧಿಯಂತೆ ಇರಲು ಸಾಧ್ಯವಿಲ್ಲ ಎಂದುಕೊಂಡು ಬಡವರಿಗೆ ಸಹಾಯ ಮಾಡುವ ಜನಸ್ನೇಹಿ ವ್ಯಕ್ತಿಯಾಗುತ್ತಾನೆ. ಅವನ ತಂದೆ ದರೋಡೆಕೋರನಾಗಿದ್ದರೂ, ಆತ ಒಳ್ಳೆಯ ಮಾರ್ಗವನ್ನು ಆಯ್ಕೆಮಾಡುತ್ತಾನೆ …
ಚಿತ್ರದಲ್ಲಿ ಐದು ಹಾಡುಗಳು ಹಾಗೂ ನಾಲ್ಕು ಫೈಟ್ ಸನ್ನಿವೇಶಗಳಿದ್ದು, ಚೆನ್ನೈ, ಚಿಕ್ಕಮಗಳೂರು ಹಾಗೂ ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಮಧುವಂತಿ ಅಡ್ವೋಕೇಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವೈಜಿ ಒಬ್ಬ ರಾಜಕಾರಣಿಯಾಗಿ ಅಭಿನಯಿಸಿದ್ದಾರೆ. ಏಪ್ರಿಲ್ನಲ್ಲಿ ಫಸ್ಟ್ ಕಾಪಿ ಸಿದ್ಧವಾಗಲಿದ್ದು, ಮೇ–ಜೂನ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ .

ಕಾರ್ಯಕ್ರಮದಲ್ಲಿ ಡಾ. ಶಿವಪ್ಪ ಸಂತೋಷ್ ಅವರಿಗೆ ಮಾರ್ಗದರ್ಶನ ನೀಡುತ್ತಿರುವುದಾಗಿ ತಿಳಿಸಿದರು. ಅಶ್ವಿನಿ ಗೌಡ ಸಹ ಅತಿಥಿಯಾಗಿ ಉಪಸ್ಥಿತರಿದ್ದರು.
