Ashwaveega News 24×7 ಫೆಬ್ರವರಿ 15 -2026 : ಬೆಂಗಳೂರು, ಫೆ.15: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ವಾಗುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನಾವು ದೆವ್ವದ ನೆರಳಿನ ಜೊತೆ ಹೋರಾಡ್ತಿದ್ದೇವೆ. ಇಲ್ಲಿ ದೆವ್ವ ಅಂದ್ರೆ Rashtriya Swayamsevak Sangh (ಆರ್ಎಸ್ಎಸ್) ಮತ್ತು ಅದರ ನೆರಳು ಅಂದ್ರೆ Bharatiya Janata Party (ಬಿಜೆಪಿ)” ಎಂದು ತೀವ್ರವಾಗಿ ಟೀಕಿಸಿದರು.
ದೇಶಭಕ್ತಿ ಹೆಸರಿನಲ್ಲಿ ಜನರನ್ನು ಪ್ರಚೋದಿಸಲಾಗುತ್ತಿದೆ ಎಂದು ಆರೋಪಿಸಿದ ಖರ್ಗೆ, “ದೇಶಭಕ್ತಿ ಕಿಚ್ಚು ಹಚ್ಚಿಸೋ ಎಷ್ಟು ಜನ ಗೋ ಮೂತ್ರ ಕುಡಿದಿದ್ದಾರೆ ? ಬಿಜೆಪಿ ನಾಯಕರ ಎಷ್ಟು ಜನರ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಹೋರಾಟಕ್ಕೆ ಬರುತ್ತಾರೆ ? ಐಷಾರಾಮಿ ಜೀವನ ನಡೆಸೋದು ಇವರ ಮಕ್ಕಳು ಬಡವರ ಮಕ್ಕಳು ಮಾತ್ರ ಇವರಿಗೆ ಹೋರಾಟದ ಶಕ್ತಿಗಳೇ ?” ಎಂದು ಪ್ರಶ್ನಿಸಿದರು.
“ಕಷ್ಟಪಡುವವರು ನಮ್ಮ ಮನೆ ಮಕ್ಕಳಾ ? ಯಾಕೆ ಸದಾ ಬಡವರ ಮಕ್ಕಳನ್ನೇ ಮುನ್ನಡೆಸುತ್ತಾರೆ ?” ಎಂದು ಅವರು ವಾಗ್ದಾಳಿ ಮುಂದುವರಿಸಿದರು.
ಆರ್ಎಸ್ಎಸ್ ಪ್ರಭಾವವಿಲ್ಲದಿದ್ದರೆ ಬಿಜೆಪಿ ಪರಿಸ್ಥಿತಿ ಜೆಡಿಎಸ್ಗಿಂತಲೂ ಹೀನವಾಗುತ್ತದೆ . “ನೂರು ವರ್ಷಗಳಿಂದ ಬಿಟ್ಟಿದ್ದೇವೆ, ಈಗಲೂ ಬಿಡೋಕಾಗುತ್ತಾ? ಆರ್ಎಸ್ಎಸ್ ಆಗಲಿ, ಎಸ್ಡಿಪಿಐ ಆಗಲಿ—ಯಾವ ಕೋಮುವಾದಿ ಸಂಘಟನೆಗಳಾದರೂ ಕಾನೂನಿನ ಅಡಿ ತರಬೇಕು. ಕಾನೂನಾತ್ಮಕವಾಗಿ ಅವುಗಳನ್ನು ರಿಜಿಸ್ಟರ್ ಮಾಡಿಸುತ್ತೇವೆ” ಎಂದು ಹೇಳಿದರು.
ಸಚಿವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ . ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
