Ashwaveega News 24×7 ಫೆಬ್ರವರಿ 15 -2026 – ಮೈಸೂರು : ನಗರದ ಬಸ್ ನಿಲ್ದಾಣದ ಸಮೀಪ ಇಂದು ಬೆಳಿಗ್ಗೆ ಭಾರೀ ಅವಘಡ ಸಂಭವಿಸಿದೆ. Karnataka State Road Transport Corporation (KSRTC) ಬಸ್ ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಕೆ.ಆರ್. ಸರ್ಕಲ್ ಕಡೆದಿಂದ ಬರುತ್ತಿದ್ದ ಬಸ್ ಏಕಾಏಕಿ ಬ್ರೇಕ್ ಫೇಲ್ ಆದ ಕಾರಣ ಮುಂಭಾಗದಲ್ಲಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಆಟೋ ಸಂಪೂರ್ಣ ಜಖಂ ಆಗಿದೆ.
ಅವಘಡದ ವೇಳೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವತಿಯರು ಅಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ . ಸ್ಥಳೀಯರು ತಕ್ಷಣವೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಆಟೋ ಚಾಲಕರು ಹಾಗೂ ಸ್ಥಳೀಯರು KSRTC ಬಸ್ ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಬಸ್ಗಳ ತಾಂತ್ರಿಕ ಸ್ಥಿತಿ ಸರಿಯಾಗಿ ಪರಿಶೀಲಿಸಬೇಕು. ಬ್ರೇಕ್ ಫೇಲ್ ಆಗುವ ಘಟನೆಗಳು ಮರುಕಳಿಸಬಾರದು” ಎಂದು ಆಗ್ರಹಿಸಿದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಗರದ ಮಧ್ಯ ಭಾಗದಲ್ಲೇ ನಡೆದ ಈ ಅವಘಡದಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು.
