Ashwaveega News 24×7 ಫೆಬ್ರವರಿ 16 -2026 : ಕರ್ನಾಟಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾದದ್ದು ಕಾಂಗ್ರೆಸ್ನ ಒಳ ಜಟಾಪಟಿ. “ಪವರ್ ಫೈಟ್”ಗೆ ಹೈಕಮಾಂಡ್ ಸುಸ್ತಾಗಿದೆಯೇ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ದಿಲ್ಲಿ ನಾಯಕರ ಸೂಚನೆಗೂ ರಾಜ್ಯದ ಕೆಲ ನಾಯಕರು ಡೋಂಟ್ ಕೇರ್ ಧೋರಣೆ ತೋರಿಸುತ್ತಾರೆಯೇ ಎನ್ನುವ ಮಾತು ಪಕ್ಷದ ಒಳಗೇ ಕೇಳಿ ಬರುತ್ತಿದೆ.
ಮುಖ್ಯಮಂತ್ರಿ Siddaramaiah ಮತ್ತು ಉಪ ಮುಖ್ಯಮಂತ್ರಿ D. K. Shivakumar ಬಣಗಳ ನಡುವೆ ನಡೆಯುತ್ತಿರುವ ನಾಯಕತ್ವ ಜಟಾಪಟಿ ವರಿಷ್ಠರಿಗೆ ಟೆನ್ಶನ್ ಹೆಚ್ಚಿಸಿದೆ . ಶಾಸಕರ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಹಾಕಲು ಪಕ್ಷ ಹರ ಸಾಹಸ ಪಡುತ್ತಿದೆ. “ಸುಮ್ಮನಿರಿ” ಎಂಬ ಸೂಚನೆಗಳಿದ್ದರೂ ಬಹಿರಂಗ ಬ್ಯಾಟಿಂಗ್ ನಿಲ್ಲದಿರುವುದು ವರಿಷ್ಠರ ತಲೆನೋವಿಗೆ ಕಾರಣವಾಗಿದೆ.
ಸಿಎಂ ಮತ್ತು ಡಿಸಿಎಂ ಬಣಗಳಿಂದ ನಿರಂತರವಾಗಿ ಬರುತ್ತಿರುವ ಸ್ಟೇಟ್ಮೆಂಟ್ಗಳು ಗೊಂದಲಕ್ಕೆ ದಾರಿ ಮಾಡಿಕೊಡುತ್ತಿವೆ. ಆಪ್ತರ ಹೇಳಿಕೆಗಳ ಬಗ್ಗೆ ಇಬ್ಬರೂ ನಾಯಕರು ಹೆಚ್ಚಿನ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಒಳಕಿತ್ತಾಟದ ನಡುವೆಯೇ ಎಐಸಿಸಿ ಅಧ್ಯಕ್ಷ Mallikarjun Kharge ಮೌನ ವಹಿಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲೇ ಇದ್ದರೂ ಹಾವೇರಿ ಸಾಧನಾ ಸಮಾವೇಶದಿಂದ ಖರ್ಗೆ ದೂರ ಉಳಿದಿದ್ದು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಶಾಸಕರ ಮೇಲಿನ ಅಸಮಾಧಾನವೇ ? ಅಥವಾ ಸಿಎಂ, ಡಿಸಿಎಂ ಬಣಗಳ ಮೇಲೆ ಸಿಟ್ಟಿನ ಸೂಚನೆಯೇ ? ಎಂಬ ಚರ್ಚೆಗಳು ಜೋರಾಗಿದೆ.
ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿರಿಸಲು ಬದಲು ಒಳಜಗಳಗಳೇ ಹೆಚ್ಚು ಸುದ್ದಿಯಾಗುತ್ತಿರುವುದು ಪಕ್ಷದ ಇಮೇಜ್ಗೆ ಧಕ್ಕೆ ತರುತ್ತಿದೆಯೇ ಎಂಬ ಆತಂಕವೂ ವ್ಯಕ್ತವಾಗಿದೆ. ಹೈಕಮಾಂಡ್ನ ಮುಂದಿನ ನಡೆ ಏನು? ನಾಯಕತ್ವ ಜಟಾಪಟಿಗೆ ಬ್ರೇಕ್ ಬೀಳುತ್ತದೆಯೇ ? ಎಂಬುದು ಇದೀಗ ರಾಜಕೀಯ ವಲಯದ ದೊಡ್ಡ ಪ್ರಶ್ನೆಯಾಗಿದೆ …
