Ashwaveega News 24×7 ಫೆಬ್ರವರಿ 16 -2026 ಶಿವಮೊಗ್ಗ : ಅವೈಜ್ಞಾನಿಕವಾಗಿ ನಿರ್ಮಿಸಿದ ರೋಡ್ ಹಂಪ್ ಒಂದರಿಂದ ಯುವಕನೊಬ್ಬ ಪ್ರಾಣ ಕಳೆದುಕೊಂಡ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಪಾಲಿಕೆಯಿಂದ ನಿರ್ಮಿಸಿರುವ ಹಂಪ್ ಸರಿಯಾದ ಸೂಚನಾ ಫಲಕವಿಲ್ಲದೆ ಹಾಗೂ ಎಚ್ಚರಿಕೆ ಗುರುತುಗಳಿಲ್ಲದೆ ಇರುವುದರಿಂದ ಅಪಘಾತ ಸಂಭವಿಸಿದೆ . ಹಂಪ್ ಗಮನಿಸದೆ ವೇಗವಾಗಿ ಬಂದ ಬೈಕ್ ಸವಾರನು ಹಂಪ್ಗೆ ಡಿಕ್ಕಿ ಹೊಡೆದು ಎಸೆದು ಬಿದ್ದಿದ್ದಾನೆ.
ವಾದಿ ಉದಾ ನಿವಾಸಿ ಉಲ್ಲಾ (35) ಮೃತ ದುರ್ದೈವಿ. ಮೊಬೈಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಉಲ್ಲಾ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೈಕ್ನಿಂದ ಬಿದ್ದು ಒದ್ದಾಡುತ್ತಿದ್ದ ದೃಶ್ಯಗಳು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಗೊಂಡಿವೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.
ಅವೈಜ್ಞಾನಿಕ ಹಂಪ್ಗಳ ನಿರ್ಮಾಣದಿಂದ ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ . ರಸ್ತೆ ಸುರಕ್ಷತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
