Ashwaveega News 24×7 ಫೆಬ್ರವರಿ 16 -2026 : 49ನೇ ವಸಂತಕ್ಕೆ ಕಾಲಿಟ್ಟಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
ನಟಿ ರಕ್ಷಿತಾ ಪ್ರೇಮ್ ಭಾವುಕವಾಗಿ ಬರ್ತ್ಡೇ ಶುಭಾಶಯ ಕೋರಿದ್ದಾರೆ. “ಪ್ರತಿದಿನ ನಿನ್ನನ್ನ ಮಿಸ್ ಮಾಡಿಕೊಳ್ಳುತ್ತೇನೆ… ನೀನು ಸಂತೋಷವಾಗಿರುವುದನ್ನು ನೋಡಲು ಬಯಸುತ್ತೇನೆ… ಬೇಗ ಮನೆಗೆ ಬಾ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಸಂದೇಶ ಅಭಿಮಾನಿಗಳ ಗಮನ ಸೆಳೆದಿದೆ.
ಮತ್ತೊಂದೆಡೆ ನಟ ಧನ್ವೀರ್ ಗೌಡ ಕೂಡ ದರ್ಶನ್ಗೆ ವಿಶ್ ಮಾಡಿದ್ದಾರೆ. ಹಳೆಯ ವಿಡಿಯೋವೊಂದನ್ನು ಹಂಚಿಕೊಂಡು, “ಉಸಿರು ಇರೋವರೆಗೂ ನಿಮ್ಮ ಹಿಂದೆ ಇರ್ತೇವೆ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ದರ್ಶನ್ ಜೊತೆಗಿನ ನೆನಪುಗಳನ್ನು ಹಂಚಿಕೊಂಡ ಧನ್ವೀರ್ ಅವರ ಪೋಸ್ಟ್ ವೈರಲ್ ಆಗುತ್ತಿದೆ.
ಸದ್ಯ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವುದಾದರೂ , ಅವರ ಮೇಲಿನ ಅಭಿಮಾನಿಗಳ ಪ್ರೀತಿ ಹಾಗೂ ಕ್ರೇಜ್ ಕಡಿಮೆಯಾಗಿಲ್ಲ. “ದಾಸ” ಎಂದೇ ಅಭಿಮಾನಿಗಳು ಕರೆಯುವ ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿವಿಧ ರೀತಿಯಲ್ಲಿ ಆಚರಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡ ಕಾಟೇರ ಚಿತ್ರದ ಯಶಸ್ಸಿನ ನಂತರವೂ ದರ್ಶನ್ ಮೇಲಿನ ಕ್ರೇಜ್ ಅದೆ ಮಟ್ಟದಲ್ಲಿ ಮುಂದುವರಿದಿದೆ. ಕಾರಾಗೃಹದಲ್ಲಿದ್ದರೂ ಚಾಲೆಂಜಿಂಗ್ ಸ್ಟಾರ್ಗೆ ಅಭಿಮಾನಿಗಳ ಬೆಂಬಲ ಅಚಲವಾಗಿದೆ.
