Ashwaveega News 24×7 ಫೆಬ್ರವರಿ 16 -2026 : ಪುರುಷರಿಗಷ್ಟೇ ಸೀಮಿತವಾಗಿದ್ದ ಆಟೋ ಚಾಲನೆ ಕ್ಷೇತ್ರದಲ್ಲಿ ಇದೀಗ ಮಹಿಳೆಯರ ಭರ್ಜರಿ ಎಂಟ್ರಿ . ಬೆಂಗಳೂರುದಲ್ಲಿ 2 ಸಾವಿರ “ಸಖಿ” ಆಟೋಗಳನ್ನು ರಸ್ತೆಗಿಳಿಸಲು ಸಿದ್ಧತೆ ನಡೆಯುತ್ತಿದೆ.
“ಸಖಿ” ಆಟೋಗಳ ಮೂಲಕ ಮಹಿಳೆಯರು ಸ್ಟೇರಿಂಗ್ ಹಿಡಿದು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ ವರೆಗೆ ಸೇವೆ ನೀಡಲಿದ್ದಾರೆ. ಮಹಿಳಾ ಸುರಕ್ಷತೆ ಮತ್ತು ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬರುತ್ತಿದೆ.
ಈ ವಿಶೇಷ ಆಟೋಗಳನ್ನು ಮೊಬೈಲ್ ಆ್ಯಪ್ ಮೂಲಕ ಬುಕ್ ಮಾಡಬಹುದಾಗಿದೆ. ಸದ್ಯಕ್ಕೆ ಅಪ್ಲಿಕೇಶನ್ ಅಭಿವೃದ್ಧಿ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.
“ಸಖಿ” ಆಟೋ ಸೇವೆಯಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ ಮತ್ತು ನಂಬಿಕಸ್ಥ ಪ್ರಯಾಣ ಸೌಲಭ್ಯ ಸಿಗಲಿದೆ ಎಂಬ ನಿರೀಕ್ಷೆ ಇದೆ. ಜೊತೆಗೆ ಮಹಿಳೆಯರಿಗೆ ಉದ್ಯೋಗಾವಕಾಶವೂ ಸೃಷ್ಟಿಯಾಗಲಿದೆ.
ಒಟ್ಟಾರೆ, ರಾಜಧಾನಿಯಲ್ಲಿ ಮಹಿಳೆಯರಿಗಾಗಿ ಮಹಿಳೆಯರೇ ಚಾಲನೆ ಮಾಡುವ “ಸಖಿ” ಆಟೋ ಸೇವೆ ಹೊಸ ಮೈಲಿಗಲ್ಲಾಗಲಿದೆ.
