Ashwaveega News 24×7 ಫೆಬ್ರವರಿ 16 -2026 : Bigg Boss Kannada Season 12 ಭರ್ಜರಿ ಯಶಸ್ಸಿನ ನಂತರ, ಅದರ ಸ್ಪರ್ಧಿಗಳನ್ನು ಮತ್ತೆ ಒಂದೇ ವೇದಿಕೆಯಲ್ಲಿ ನೋಡುವ ಅವಕಾಶವನ್ನು “ಕಲರ್ಸ್ ದೊಡ್ಮನೆ ಹಬ್ಬ ಮಾಡಿ ಕೊಟ್ಟಿದೆ .
ಬಿಗ್ ಬಾಸ್ ಸೀಸನ್ 12 ಮುಕ್ತಾಯವಾದ ಬಳಿಕ ಇದೇ ಮೊದಲ ಬಾರಿಗೆ ಎಲ್ಲಾ ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಹಾಡು, ಕುಣಿತ, ಹರಟೆ, ಮಜಾ — ಎಲ್ಲವೂ ಇಲ್ಲಿ ಡಬಲ್ ಡೋಸ್ನಲ್ಲಿ ಸಿಗಲಿದೆ. ಬಿಗ್ ಬಾಸ್ ಮನೆಯ ಟಾಸ್ಕ್ಗಳನ್ನು ನೆನಪಿಸುವಂತಹ ವಿನೂತನ ಗೇಮ್ಗಳು ಕೂಡ ಪ್ರೇಕ್ಷಕರಿಗೆ ವಿಶೇಷ ರಸದೌತಣ ನೀಡಲಿವೆ.

Sushma Rao ಅವರ ಚುಟುಕು ಮಾತು ಮತ್ತು ಚಾತುರ್ಯ ಈ ಕಾರ್ಯಕ್ರಮಕ್ಕೆ ಹೆಚ್ಚುವರಿ ಮೆರುಗು ನೀಡಲಿದೆ. ಸ್ಪರ್ಧಿಗಳ ಗುಟ್ಟುಗಳನ್ನು ಹೊರತೆಗೆದು, ಹಳೆಯ ನೆನಪುಗಳನ್ನು ಕಿಚಾಯಿಸಿ, ವೇದಿಕೆಯನ್ನು ನಗೆಗಡಲಾಗಿ ಮಾಡಲಿದ್ದಾರೆ.

ಈ ಸೀಸನ್ನಲ್ಲಿ ಹೆಚ್ಚು ಚರ್ಚೆಗೊಳಗಾದ ಮತ್ತು ವಿಜೇತರಾದ ಗಿಲ್ಲಿ ನಟರಿಗೆ ವಿಶೇಷ ವೇದಿಕೆ ಸಿದ್ಧವಾಗಿದೆ. ಅವರ ಬಿಗ್ ಬಾಸ್ ಪಯಣವನ್ನು ಸಂಭ್ರಮಿಸುವ ಕ್ಷಣಗಳು ಅಭಿಮಾನಿಗಳಿಗೆ ಖಂಡಿತ ಖುಷಿ ನೀಡಲಿವೆ. ಫ್ಯಾನ್ಸ್ ಸಹ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿರುವುದು ವಿಶೇಷ. ಬಿಗ್ ಬಾಸ್ ದಿನಗಳನ್ನು ಮೆಲುಕು ಹಾಕುವ ಸ್ಪರ್ಧಿಗಳು, ವೇದಿಕೆಯ ಮೇಲಿನ ಅದ್ಧೂರಿ ಪ್ರದರ್ಶನಗಳು, ತಮಾಷೆಯ ಆಟಗಳು — ಇವೆಲ್ಲವನ್ನೂ ಒಂದೇ ಕಾರ್ಯಕ್ರಮದಲ್ಲಿ ಕಾಣಲು ಸಿಗುತ್ತಿರುವ ಅಪರೂಪದ ಅವಕಾಶ ಇದು .
