Ashwaveega News 24×7 ಫೆಬ್ರವರಿ 18 -2026 : ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಹೇಳಿಕೆೊಂದು ಇದೀಗ ಭಾರೀ ಚರ್ಚೆ ಆಗ್ತಾಯಿದೆ . ನಟ ರವಿಚಂದ್ರನ್ ಅವರು ನಟ ದರ್ಶನ್ ಬಿಡುಗಡೆ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಹರ್ಷವನ್ನು ಮೂಡಿಸಿದೆ.
‘ಕ್ರೇಜಿಸ್ಟಾರ್’ ಎಂದೇ ಖ್ಯಾತರಾದ ರವಿಚಂದ್ರನ್ ಅವರು ತಮ್ಮ ಮಾತಿನಲ್ಲಿ, “ಇನ್ನೆರಡು ತಿಂಗಳಲ್ಲಿ ದರ್ಶನ್ ಜೈಲಿನಿಂದ ಹೊರಬರುತ್ತಾರೆ. ನನ್ನ ಬಾಯಲ್ಲಿ ಹೇಳಿದ್ದೇನೆ — ಪಕ್ಕಾ ಬರ್ತಾರೆ, ನೆನಪಿಟ್ಟುಕೊಳ್ಳಿ,” ಎಂದು ಹೇಳಿದ್ದಾರೆ .“ಡಿ ಬಾಸ್ ನನಗೆ ಮಗನಂತೆ. ಒಂದು ಕೆಟ್ಟ ಗಳಿಗೆ ಮನುಷ್ಯನನ್ನು ಕುಗ್ಗಿಸಬಹುದು. ಆದರೆ ಯಾವತ್ತೋ ಒಂದು ದಿನ ಅವನನ್ನು ಮೇಲಕ್ಕೆ ಎಬ್ಬಿಸಲೇಬೇಕು. ಆ ದಿನಕ್ಕಾಗಿ ಎಲ್ಲರೂ ಕಾಯೋಣ. ಪ್ರತಿಫಲ ಸಿಕ್ಕೇ ಸಿಗುತ್ತದೆ,” ಎಂದು ಅವರು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.
ಈ ಹೇಳಿಕೆ ಹೊರಬಿದ್ದ ಕೂಡಲೇ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. “ಡಿ ಬಾಸ್ ಬರ್ತಾರೆ ಬಿಡ್ರೋ!” ಎಂದು ಫ್ಯಾನ್ಸ್ ಘೋಷಣೆ ಕೂಗುತ್ತಿದ್ದಾರೆ. ರವಿಚಂದ್ರನ್ ಮಾತುಗಳಿಂದ ಅಭಿಮಾನಿಗಳಿಗೆ ಹೊಸ ನಿರೀಕ್ಷೆ ಮೂಡಿದೆ.
ಇದೀಗ ದರ್ಶನ್ ಬಿಡುಗಡೆ ಕುರಿತು ಅಧಿಕೃತ ಮಾಹಿತಿ ಹೊರಬರುವುದನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಕ್ರೇಜಿಸ್ಟಾರ್ ಮಾತು ನಿಜವಾಗುತ್ತದೆಯೇ ಎಂಬುದನ್ನು ಕಾಲವೇ ಉತ್ತರಿಸಬೇಕು.
