Ashwaveega News 24×7 ಫೆಬ್ರವರಿ 18 -2026 ಮೈಸೂರು : ರಾಜ್ಯ ರಾಜಕಾರಣದಲ್ಲಿ ತಮ್ಮ ಬೆಳಕು ಮರುಕಳಿಸುತ್ತಾ ? ಪ್ರತಾಪ್ ಸಿಂಹ 2028 ರ ಅಸೆಂಬ್ಲಿ ಚುನಾವಣೆಗೆ ತನ್ನ ಕಣ್ಣು ಹಾಕಿದ್ದಾರೆ ಎಂಬುದನ್ನು ಅಭಿಮಾನಿಗಳು ಜೋರಾಗಿ ತೋರಿಸಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಭವಿಷ್ಯದ ಎಂಎಲ್ಎಗೆ ಪ್ರತಾಪ್ ಸಿಂಹ ಆಯ್ಕೆ ಆಗಲಿ ಎಂದು ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿದ್ದಾರೆ.
ಮಲೆಮಾದಪ್ಪನ ಮೊರೆಗೆ ಹೋದ ಅಭಿಮಾನಿಗಳ ಬಳಗ, 101 ಇಡುಗಾಯಿ ಒಡೆದು ಪ್ರತಾಪ್ ಸಿಂಹ “ಫ್ಯಾನ್ಸ್” ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹುಲಿವಾಹನ ಸೇವೆ, ಭಾವಚಿತ್ರ ಸ್ಥಾಪನೆ, ಉಘೇ ಮಾದಪ್ಪ ಎಂದು ಘೋಷಣೆ ಸೇರಿದಂತೆ ವಿವಿಧ ವಿಧಿ ಪದ್ಧತಿಗಳೊಂದಿಗೆ ಪೂಜೆ ನೆರವೇರಿತು.
ಅಭಿಮಾನಿಗಳು ಪೂಜೆಯ ವೇಳೆ ಪ್ರತಾಪ್ ಸಿಂಹಗೆ “ಜೈ” ಎಂದು ಘೋಷಣೆ ಕೂಗಿದರು. ಈ ಆಚರಣೆ ರಾಜ್ಯ ರಾಜಕೀಯದಲ್ಲಿ ಪ್ರತಾಪ್ ಸಿಂಹದ ಪ್ರಭಾವವನ್ನು ಮತ್ತೊಮ್ಮೆ ದೃಢಪಡಿಸುತ್ತಿದ್ದು, ಚಾಮರಾಜ ಕ್ಷೇತ್ರದಲ್ಲಿ ಮುಂಬರುವ ಚುನಾವಣೆ ಕುರಿತಾಗಿ ವಿಶೇಷ ಚರ್ಚೆಗೆ ಕಾರಣವಾಗಿದೆ.
ಮೈಸೂರು ಸ್ಥಳೀಯರಿಂದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳ ಉತ್ಸಾಹ ಮತ್ತು ರಾಜಕೀಯ ತೀವ್ರತೆಯನ್ನು ಕಾರಣವಾಗುತ್ತೆ …
