Ashwaveega News 24×7 ಫೆಬ್ರವರಿ 22 – 2026 : ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಾಗಬಹುದೇ ಎಂಬ ಪ್ರಶ್ನೆ ಇದೀಗ ಜೋರಾಗಿದೆ. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಸೋಶಿಯಲ್ ಮೀಡಿಯಾ ಗೀಳು, ಗೇಮಿಂಗ್ ಹಾಗೂ ರೀಲ್ಸ್ ವ್ಯಸನ ಹಿನ್ನೆಲೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿ Siddaramaiah ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ವಿದ್ಯಾರ್ಥಿಗಳ ಮೊಬೈಲ್ ಬಳಕೆಯ ಪರಿಣಾಮಗಳ ಬಗ್ಗೆ ಚರ್ಚೆ ನಡೆದಿರುವುದು ತಿಳಿದುಬಂದಿದೆ. ಕುಲಪತಿಗಳಿಂದ ಅಭಿಪ್ರಾಯಗಳನ್ನು ಕೇಳಲಾಗಿದ್ದು, ಶಾಲಾ ಸಮಯದಲ್ಲಿ ಫೋನ್ ಬಳಕೆಗೆ ನಿಯಂತ್ರಣ ಹೇರುವ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದಂತಿದೆ.
16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ . ಆಸ್ಟ್ರೇಲಿಯಾದಲ್ಲಿ ಶಾಲಾ ಆವರಣದಲ್ಲಿ ಮೊಬೈಲ್ ಬ್ಯಾನ್ ಜಾರಿಯಲ್ಲಿರುವ ಹಿನ್ನೆಲೆ , ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸೋಶಿಯಲ್ ಮೀಡಿಯಾ ಬಳಕೆಯಿಂದ ವಿದ್ಯಾರ್ಥಿಗಳು ದಿನದ ಹಲವಾರು ಗಂಟೆಗಳು ಫೋನ್ನಲ್ಲಿ ತಲ್ಲೀನರಾಗುತ್ತಿರುವುದು ಕಂಡುಬಂದಿದೆ. ಗೇಮಿಂಗ್, ಚಾಟ್ ಹಾಗೂ ರೀಲ್ಸ್ ವ್ಯಸನದಿಂದ ಓದಿನ ಮೇಲೆ ನಿರಾಸಕ್ತಿ ಮೂಡುತ್ತಿರುವುದರ ಜೊತೆಗೆ ಮಾನಸಿಕ ಒತ್ತಡ , ನಿದ್ರೆ ಕೊರತೆ ಮತ್ತು ದೈಹಿಕ ಸಮಸ್ಯೆಗಳು ಹೆಚ್ಚುತ್ತಿರುವುದಾಗಿ ತಜ್ಞರು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದು, ಮೊಬೈಲ್ ಬ್ಯಾನ್ ಅಥವಾ ಕಠಿಣ ನಿಯಂತ್ರಣ ಕುರಿತಾಗಿ ಶೀಘ್ರವೇ ಸ್ಪಷ್ಟ ನಿರ್ಧಾರ ಹೊರಬರುವ ಸಾಧ್ಯತೆ ಇದೆ. ಶಿಕ್ಷಣ ವಲಯ ಹಾಗೂ ಪೋಷಕರ ಅಭಿಪ್ರಾಯಗಳನ್ನೂ ಪರಿಗಣಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ …
