Ashwaveega News 24×7 ಫೆಬ್ರವರಿ 24 – 2026 ಬೆಂಗಳೂರು : ಬೆಂಗಳೂರಿನ ನಿವಾಸದಲ್ಲಿ ಬೆಳ್ಳಂಬೆಳಗ್ಗೆ ನಡೆದ ಈ ಭೇಟಿಯು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಸುಮಾರು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆ ವೇಳೆ ಜ್ಯೂನಿಯರ್ ಖರ್ಗೆ ಸಖತ್ ಜೋಷ್ನಲ್ಲಿ ಕಾಣಿಸಿಕೊಂಡಿದ್ದಾರೆ . ಸೀನಿಯರ್ ಖರ್ಗೆಯವರ ಜೊತೆ ನಗುನಗುತ್ತಾ ಮಾತುಕತೆ ನಡೆಸಿದ ಪ್ರಿಯಾಂಕ್ ಖರ್ಗೆಯ ವರ್ತನೆ ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆ .
ಭೇಟಿಯ ಬಳಿಕ ಹಿರಿಯ ಖರ್ಗೆ ಏರ್ಪೋರ್ಟ್ಗೆ ತೆರಳಿ ಭೋಪಾಲ್ ಕಡೆ ವಿಮಾನದಲ್ಲಿ ಹೊರಟಿದ್ದಾರೆ. ಈ ತುರ್ತು ಭೇಟಿ ಮತ್ತು ಪ್ರಯಾಣದ ಸಮಯವೂ ಕಾಂಗ್ರೆಸ್ ಒಳರಾಜಕಾರಣದ ಮೇಲೆ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ.
ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿ ಆಗಿರುವ Siddaramaiah ಹಾಗೂ ಉಪ ಮುಖ್ಯಮಂತ್ರಿ D. K. Shivakumar ನಡುವೆ ಸಮತೋಲನ ರಾಜಕೀಯ ನಡೆಯುತ್ತಿರುವ ಸಂದರ್ಭದಲ್ಲಿ, ಡಿಕೆ ಸಿಎಂ – ಪ್ರಿಯಾಂಕ್ ಖರ್ಗೆ ಡಿಸಿಎಂ ಫಾರ್ಮುಲಾ ಕುರಿತ ಮಾತುಗಳು ಕೇಳಿಬರುತ್ತಿವೆ.
ಹಿರಿಯ ಖರ್ಗೆ ರಾಜ್ಯ ರಾಜಕಾರಣದಲ್ಲಿ ಹೊಸ ಪ್ಲಾನ್ ರೂಪಿಸುತ್ತಿದ್ದಾರಾ ? ಏಪ್ರಿಲ್ನಲ್ಲಿ ಸಿದ್ದು ಕೆಳಗಿಳಿದು , ಡಿಕೆಶಿ ಮುಖ್ಯಮಂತ್ರಿಯಾಗಿ , ಪ್ರಿಯಾಂಕ್ ಖರ್ಗೆ ಡಿಸಿಎಂ ಆಗುವ ಸಮೀಕರಣ ಜಾರಿಯಾಗುತ್ತದೆಯಾ ? ಎಂಬ ಪ್ರಶ್ನೆಗಳು ಕಾಂಗ್ರೆಸ್ ವಲಯದಲ್ಲಿ ಗುಸುಗುಸು ಹುಟ್ಟಿಸಿವೆ.
ಖರ್ಗೆ ಪ್ಲಾನ್ ಕುರಿತ ಚರ್ಚೆಗಳು ಸಿಎಂ ಬಣದ ನಾಯಕರಲ್ಲಿ ಅಸಮಾಧಾನ ಮೂಡಿಸಿರುವುದಾಗಿ ಮೂಲಗಳು ಹೇಳುತ್ತಿವೆ. ಪಕ್ಷದೊಳಗಿನ ಪವರ್ ಫೈಟ್ಗೆ ಇದು ಮತ್ತೊಂದು ನಾಟಕೀಯ ತಿರುವಾಗಬಹುದೆಂಬ ಆತಂಕವೂ ಇದೆ.
ಹಾಗಾದರೆ, ಈ ಸಮೀಕರಣ ನಿಜವಾದರೆ ಇತರ ಪ್ರಮುಖ ನಾಯಕರಾದ ಸತೀಶ್, ಪರಂ, ಮಹದೇವಪ್ಪ, ಯತೀಂದ್ರ ಅವರ ಭವಿಷ್ಯ ಏನು ? ಅಧಿಕಾರ ಹಂಚಿಕೆ ಹೇಗೆ ನಡೆಯಲಿದೆ ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿವೆ.
