Ashwaveega News 24×7 ಮಾರ್ಚ್ 02– 2026 : ಟಾಲಿವುಡ್ನ ಹಾಟ್ ಫೇವರಿಟ್ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ಸಂಭ್ರಮ ಇದೀಗ ವಿಜಯ್ ಅವರ ಸ್ವಗ್ರಾಮದಲ್ಲೂ ಜೋರಾಗಿದೆ.
ತೆಲಂಗಾಣ ರಾಜ್ಯದ ನಾಗರ್ ಕರ್ನೂಲ್ ಜಿಲ್ಲೆಯ ತುಮ್ಮನ್ಪೇಟೆ ಗ್ರಾಮದಲ್ಲಿ ನೂತನ ವಧು – ವರರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಗ್ರಾಮಸ್ಥರು ಪಟಾಕಿ ಸಿಡಿಸಿ, ಪೂರ್ಣಕುಂಭ ಸ್ವಾಗತ ನೀಡಿ ದಂಪತಿಯನ್ನು ಬರಮಾಡಿಕೊಂಡಿದ್ದಾರೆ.
ವಿಜಯ್ ಕುಟುಂಬವು ಗ್ರಾಮದಲ್ಲಿ ನಿರ್ಮಿಸಿರುವ ನೂತನ ಫಾರಂಹೌಸ್ನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ವಿಜಯ್–ರಶ್ಮಿಕಾ ಜೋಡಿ ಸತ್ಯನಾರಾಯಣಸ್ವಾಮಿ ವ್ರತ ಕೈಗೊಂಡಿದ್ದು, ಕುಟುಂಬ ಸದಸ್ಯರು ಹಾಗೂ ಆಪ್ತರು ಪಾಲ್ಗೊಂಡರು.
ಫೆಬ್ರವರಿ 26ರಂದು ಉದಯಪುರದಲ್ಲಿ ನಡೆದ ಸೆಲೆಬ್ರಿಟಿ ಮದುವೆಯ ಬಳಿಕ, ಇದೀಗ ಸ್ವಗ್ರಾಮದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಗ್ರಾಮಸ್ಥರು “ನಮ್ಮ ಮನೆಯ ಮಗ ಮತ್ತು ಸೊಸೆ” ಎಂದು ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ.
ಚಿತ್ರರಂಗದಲ್ಲಿ ಬ್ಯುಸಿ ಶೆಡ್ಯೂಲ್ ನಡುವೆಯೂ ಸ್ವಗ್ರಾಮಕ್ಕೆ ಸಮಯ ಕೊಟ್ಟು ಬಂದ ದಂಪತಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಸ್ವಾಗತ ಸಮಾರಂಭದ ಫೋಟೋಗಳು ವೈರಲ್ ಆಗುತ್ತಿವೆ.
