Ashwaveega News 24×7 ಮಾರ್ಚ್ 02– 2026 : ಮಧ್ಯಪ್ರಾಚ್ಯದಲ್ಲಿ ಉಂಟಾದ ಅಚಾನಕ್ ಸಂಘರ್ಷದ ನಡುವೆ ಕರ್ನಾಟಕ ಮೂಲದ ಇಬ್ಬರು ಗಾಯಗೊಂಡಿರುವ ಮಾಹಿತಿ ಹೊರಬಿದ್ದಿದೆ . ಆದರೆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೃಷ್ಣ ಬೈರೇಗೌಡ ಅವರು, “ಗಾಯಗೊಂಡಿರುವ ಇಬ್ಬರೂ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ .
ಕರ್ನಾಟಕ ಸರ್ಕಾರ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸಹಾಯಕ್ಕಾಗಿ ವಿಶೇಷ ಹೆಲ್ಪ್ಲೈನ್ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ 109ಕ್ಕೆ ಈಗಾಗಲೇ 100ಕ್ಕೂ ಹೆಚ್ಚು ಕರೆಗಳು ಬಂದಿವೆ. ಅವುಗಳಲ್ಲಿ ದುಬೈಯಿಂದ ಸುಮಾರು 100 ಕರೆಗಳು ಹಾಗೂ ಬಹ್ರೇನ್ನಿಂದ 9 ಕರೆಗಳು ದಾಖಲಾಗಿವೆ ಎಂದು ತಿಳಿಸಲಾಗಿದೆ.
“ಉಳಿದ ಪ್ರದೇಶಗಳಲ್ಲಿ ಹೆಚ್ಚಿನ ಆತಂಕ ಇಲ್ಲದ ಕಾರಣ ಹೆಚ್ಚಿನ ಕರೆಗಳು ಬಂದಿಲ್ಲ. ವಿಮಾನಯಾನ ಸೇವೆಗಳು ಪುನರಾರಂಭವಾದ ತಕ್ಷಣ ನಮ್ಮವರನ್ನು ಸುರಕ್ಷಿತವಾಗಿ ಕರೆತರುವ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಸಚಿವರು ತಿಳಿಸಿದ್ದಾರೆ.
ಅಚಾನಕ್ ಉಂಟಾದ ಯುದ್ಧ ಸನ್ನಿವೇಶದಿಂದ ಕೆಲಕಾಲ ಗೊಂದಲ ಸೃಷ್ಟಿಯಾದರೂ , ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಸರ್ಕಾರ ಭರವಸೆ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ಇರುವ ಕರ್ನಾಟಕದ ಜನರಿಗೆ ಅನಾವಶ್ಯಕ ಆತಂಕ ಬೇಡ , ಅಧಿಕೃತ ಮಾಹಿತಿಯನ್ನೇ ನಂಬಬೇಕು ಎಂದು ಸರ್ಕಾರ ಮನವಿ ಮಾಡಿದೆ .
