Ashwaveega News 24×7 ಮಾರ್ಚ್ 02– 2026 : ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಇರಾನ್ – ಇಸ್ರೇಲ್ ಸಂಘರ್ಷದ ಪರಿಣಾಮ ಭಾರತೀಯ ಷೇರುಪೇಟೆಯ ಮೇಲೂ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಬೆಳಗ್ಗೆಯಿಂದಲೇ ಮಾರುಕಟ್ಟೆ ಕುಸಿತದ ಹಾದಿ ಹಿಡಿದಿದ್ದು, BSE Sensex 1,582 ಪಾಯಿಂಟ್ಗಳಷ್ಟು ಇಳಿಕೆಯಾಗಿದ್ದರೆ, Nifty 50 480 ಪಾಯಿಂಟ್ಗಳಷ್ಟು ಕುಸಿದಿದೆ.
ಬ್ಯಾಂಕಿಂಗ್, ಐಟಿ, ಆಟೋ ಸೇರಿದಂತೆ ಬಹುತೇಕ ಎಲ್ಲಾ ಸೆಕ್ಟರ್ಗಳು ರೆಡ್ ಮಾರ್ಕ್ನಲ್ಲಿ ವಹಿವಾಟು ನಡೆಸುತ್ತಿವೆ. ಹೂಡಿಕೆದಾರರಿಗೆ ದೊಡ್ಡಮಟ್ಟದ ನಷ್ಟ ಸಂಭವಿಸಿದೆ .
ಇದಕ್ಕೆ ವಿರುದ್ಧವಾಗಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುವ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. 10 ಗ್ರಾಂ ಚಿನ್ನದ ದರ 1 ಲಕ್ಷ 73 ಸಾವಿರ ರೂಪಾಯಿ ಗಡಿ ತಲುಪಿದ್ದು, ಕೆ.ಜಿ ಬೆಳ್ಳಿ ದರ 3 ಲಕ್ಷ ರೂಪಾಯಿ ಗಡಿ ಮುಟ್ಟಿದೆ .
ಯುದ್ಧದ ಆತಂಕ ಮುಂದುವರಿದರೆ ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಹಲವರು ಷೇರುಪೇಟೆಯಿಂದ ಹಣ ಹಿಂಪಡೆದು ಚಿನ್ನ-ಬೆಳ್ಳಿಯಂತಹ ಸುರಕ್ಷಿತ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತಿರುವುದು ಗಮನಾರ್ಹ .
ವಿಶ್ಲೇಷಕರ ಪ್ರಕಾರ, ಸಂಘರ್ಷ ಶೀಘ್ರ ಶಮನವಾಗದಿದ್ದರೆ ಮಾರುಕಟ್ಟೆಗಳಲ್ಲಿ ಇನ್ನಷ್ಟು ಅಸ್ಥಿರತೆ ಕಂಡುಬರುವ ಸಾಧ್ಯತೆ ಇದೆ. ಹೂಡಿಕೆದಾರರು ಆತುರದ ನಿರ್ಧಾರ ಕೈಗೊಳ್ಳದೇ, ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿ ಮುಂದುವರಿಯುವಂತೆ ಸಲಹೆ ನೀಡಲಾಗಿದೆ .
