Ashwaveega News 24×7 ಮಾರ್ಚ್ 06 – 2026 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹೈಟೆಕ್ ಯೋಜನೆ ರೂಪಿಸಿದೆ. ಅಪಘಾತಪ್ರವಣ ಪ್ರದೇಶಗಳನ್ನು ಗುರುತಿಸಲು ಐಐಟಿ ಮದ್ರಾಸ್ ಸಹಯೋಗದಲ್ಲಿ ಆಧುನಿಕ ತಂತ್ರಾಂಶ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ.
ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಸರ್ಕಾರ ಹೊಸ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ . ಈ ಯೋಜನೆಯಡಿ ಐಐಟಿ ಮದ್ರಾಸ್ ಸಹಯೋಗದಲ್ಲಿ ವಿಶೇಷ ಆಧುನಿಕ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ .
ನಗರದಲ್ಲಿ ಅಪಘಾತಗಳು ಹೆಚ್ಚು ಸಂಭವಿಸುವ ಸ್ಥಳಗಳನ್ನು ಗುರುತಿಸಲು ವಿಶೇಷ ಡ್ಯಾಶ್ಬೋರ್ಡ್ ಹೊಂದಿರುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ತಂತ್ರಾಂಶದ ಮೂಲಕ ಅಪಘಾತ ಆಗುವ ಪ್ರದೇಶಗಳ ಬಗ್ಗೆ ನಿಖರ ಮಾಹಿತಿ ಸಿಗಲಿದೆ.
ಅಪಘಾತಗಳ ವಿಶ್ಲೇಷಣೆ ಮಾಡಿ ಅವುಗಳ ಕಾರಣಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಈ ವ್ಯವಸ್ಥೆ ಸಹಾಯ ಮಾಡಲಿದೆ . ಮುಂದಿನ ಹಂತದಲ್ಲಿ ಈ ತಂತ್ರಾಂಶವನ್ನು ವಾಹನಗಳಲ್ಲಿ ಅಳವಡಿಸುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ . ಈ ಮೂಲಕ ರಸ್ತೆ ಸುರಕ್ಷತೆ ಹೆಚ್ಚಿಸಿ , ನಗರದಲ್ಲಿ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶ ಸರ್ಕಾರ ಹೊಂದಿದೆ .
ಒಟ್ಟಾರೆ ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳನ್ನು ತಡೆಯುವ ಹೊಸ ಪ್ರಯತ್ನಕ್ಕೆ ಸರ್ಕಾರ ಕೈಹಾಕಿದೆ …
