Ashwaveega News 24×7 ಮಾರ್ಚ್ 06 – 2026 : ವಿಧಾನಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಲ್ಪ ಕಾಲು ನೋವು ಕಾಣಿಸಿಕೊಂಡ ಘಟನೆ ನಡೆದಿದೆ. ಇದರಿಂದ ಕೆಲವು ಹೊತ್ತು ಕುಳಿತುಕೊಂಡೇ ಬಜೆಟ್ ಓದಲು ಸಿಎಂ ಸ್ಪೀಕರ್ ಬಳಿ ಅನುಮತಿ ಕೇಳಿದರು.
ವಿಧಾನಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಪ್ರತಿ ಓದುತ್ತಾ ಓದುತ್ತಾ ಸುಸ್ತಾದ ಸಿಎಂ, ತಮಗೆ ಕಾಲು ನೋವು ಆಗುತ್ತಿದೆ ಎಂದು ತಿಳಿಸಿದರು.
ಎರಡು ಪುಟಗಳನ್ನು ಓದಿದ ಬಳಿಕ ಸ್ವಲ್ಪ ಹೊತ್ತು ಕುಳಿತುಕೊಳ್ಳುತ್ತೇನೆ ಎಂದು ಸಿಎಂ ಹೇಳಿದರು. ಬಳಿಕ ಕುಳಿತುಕೊಂಡೇ ಬಜೆಟ್ ಮಂಡನೆ ಮುಂದುವರಿಸುತ್ತೇನೆ ಎಂದು ಸ್ಪೀಕರ್ ಬಳಿ ಅನುಮತಿ ಕೇಳಿದರು. ಸಿಎಂ ಮನವಿಗೆ ಸ್ಪೀಕರ್ ಯುಟಿ ಖಾದರ್ ಸಮ್ಮತಿ ಸೂಚಿಸಿದರು. ಇದರಿಂದ ಸಿದ್ದರಾಮಯ್ಯ ಕುಳಿತುಕೊಂಡೇ ಬಜೆಟ್ ಭಾಷಣ ಮುಂದುವರಿಸಿದರು.
ಈ ವೇಳೆ ವಿಪಕ್ಷ ಸದಸ್ಯರೂ ಸಹ ಸಹಾನುಭೂತಿ ತೋರಿದರು . ಸಿಎಂ ಆರೋಗ್ಯದ ವಿಚಾರದಲ್ಲಿ ವಿರೋಧ ಪಕ್ಷಗಳು ಕೂಡ ಔದಾರ್ಯ ತೋರಿದವು . ಒಟ್ಟಾರೆ ಬಜೆಟ್ ಮಂಡನೆ ವೇಳೆ ನಡೆದ ಈ ಘಟನೆ ವಿಧಾನಸಭೆಯಲ್ಲಿ ಕೆಲಕಾಲ ಗಮನ ಸೆಳೆಯಿತು .
