Ashwaveega News 24×7 ಮಾರ್ಚ್ 06 – 2026 : ಬೆಂಗಳೂರಿನ ರಸ್ತೆಗಳು ಸಜ್ಜಾಗುತ್ತಿವೆ . 5 ಪಾಲಿಕೆ ವ್ಯಾಪ್ತಿಯ ಎಲ್ಲ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಪ್ರತಿಯೊಂದು ವಾರ್ಡ್ನಲ್ಲಿ ಗುಂಡಿಗಳಿಲ್ಲದ ರಸ್ತೆಯ Targets ನಿಗದಿಯಾಗಿದೆ .
ಬೆಂಗಳೂರಿನ ನಗರದಲ್ಲಿ ರಸ್ತೆ ಅಭಿವೃದ್ಧಿಗೆ ಸರ್ಕಾರ ಮಹತ್ವದ ಹೂಡಿಕೆ ಮಾಡುತ್ತಿದೆ. 1700 ಕೋಟಿ ರೂಪಾಯಿಯ ವೆಚ್ಚದಲ್ಲಿ 158 ಕಿ.ಮೀ. ವೈಟ್ ಟ್ಯಾಪಿಂಗ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ನಗರ ರಸ್ತೆಗಳಿಗೆ ಹೊಸ ವಿಂಗಡಣೆ ಮತ್ತು ಸುರಕ್ಷತೆ ದೊರೆಯಲಿದೆ .
ಇದರ ಜೊತೆಗೆ 1936 ಕೋಟಿ ರೂಪಾಯಿಯ ಮೊತ್ತದಲ್ಲಿ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಕೂಡ ನಡೆಯುತ್ತಿವೆ. ಸಾರ್ವಜನಿಕರು ನಿರೀಕ್ಷಿಸಿದ್ದಂತೆ , ಪ್ರತಿಯೊಂದು ವಾರ್ಡ್ನಲ್ಲಿ ಗುಂಡಿಗಳಿಲ್ಲದ ಮತ್ತು ಸುಗಮಗಿರುವ ರಸ್ತೆಯ Targets ಅನುಷ್ಟಾನಗೊಳ್ಳಲಿದೆ .
ಕೆ.ಆರ್. ಪುರದಿಂದ ಸಿಲ್ಕ್ಬೋರ್ಡ್ ವರೆಗೆ ಹೊಸ ರಿಂಗ್ ರೋಡ್ ನಿರ್ಮಾಣಕ್ಕೆ ಸರ್ಕಾರ 450 ಕೋಟಿ ರೂಪಾಯಿ ಮೀಸಲಿಟ್ಟು ಯೋಜನೆ ಮುಂದುವರೆಸಿದೆ . ಈ ಹೊಸ ರಿಂಗ್ ರೋಡ್ ರಸ್ತೆ ಸಂಪರ್ಕ ಮತ್ತು ವಾಹನ ಸಂಚಾರ ಸುಗಮಗೊಳಿಸಲು ನೆರವಾಗಲಿದೆ .
ಒಟ್ಟಾರೆ, ಸಿಲಿಕಾನ್ ಸಿಟಿಯ ರಸ್ತೆ ಪ್ರಗತಿ, ಅಭಿವೃದ್ಧಿ ಮತ್ತು ಗುಂಡಿ ರಹಿತ ರಸ್ತೆಗಳ Targets ಮೂಲಕ ನಗರ ನಿವಾಸಿಗಳಿಗೆ ಸುಗಮ ಸಂಚಾರ ಅನುಭವ ನೀಡಲಿದೆ .
