Ashwaveega News 24×7 ಮಾರ್ಚ್ 08 – 2026 : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದು, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಭಾರೀ ದಾಳಿ ನಡೆಸಿದಂತೆ ವರದಿಗಳು ತಿಳಿಸಿವೆ. ಇರಾನ್ ರಾಜಧಾನಿ ಟೆಹ್ರಾನ್ ಸುತ್ತಮುತ್ತಲಿನ ಪ್ರಮುಖ ತೈಲ ಸಂಪನ್ಮೂಲಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿರುವುದಾಗಿ ಹೇಳಲಾಗುತ್ತಿದೆ.
ಟೆಹ್ರಾನ್ ಸಮೀಪದಲ್ಲಿರುವ ಶಹ್ರಾನ್ ತೈಲ ಡಿಪೋದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಅದರ ಪರಿಣಾಮವಾಗಿ ದೊಡ್ಡ ಮಟ್ಟದ ಬೆಂಕಿ ಕಾಣಿಸಿಕೊಂಡಿದೆ. ನಗರದ ಮೂರು ದಿಕ್ಕುಗಳಲ್ಲಿ ಹರಡಿರುವ ಹಲವು ಆಯಿಲ್ ಡಿಪೋಗಳು ಮತ್ತು ಸಂಗ್ರಹ ಕೇಂದ್ರಗಳು ದಾಳಿಯಿಂದ ಹಾನಿಗೊಳಗಾಗಿವೆ ಎಂದು ಮೂಲಗಳು ತಿಳಿಸಿವೆ.
ಟೆಹ್ರಾನ್ ಸುತ್ತಮುತ್ತ ಸುಮಾರು 30 ಕ್ಕೂ ಹೆಚ್ಚು ರಿಫೈನರಿ ಹಾಗೂ ತೈಲ ಸಂಗ್ರಹ ಕೇಂದ್ರಗಳು ಇರುವುದರಿಂದ, ಇವುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂಬ ಆತಂಕ ವ್ಯಕ್ತವಾಗಿದೆ. ತೈಲ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ನಾಶಮಾಡುವ ಉದ್ದೇಶದಿಂದಲೇ ಈ ದಾಳಿ ನಡೆದಿರಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಇದೇ ವೇಳೆ ಅಮೆರಿಕ–ಇಸ್ರೇಲ್ ದಾಳಿಗೆ ಇರಾನ್ ಕಠಿಣ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ. ಇರಾನ್ ತೈಲ ಸಂಪನ್ಮೂಲಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾದಲ್ಲಿ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ತೀವ್ರಗೊಂಡರೆ, ಜಾಗತಿಕ ಆರ್ಥಿಕತೆಯ ಮೇಲೂ ಅದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
